ಮಂಗಳೂರು: ಅಡಿಕೆ ಧಾರಣೆ ಇಳಿಕೆಯಿಂದ ಬೆಳೆಗಾರರಲ್ಲಿ ಅನಾವಶ್ಯಕ ಗೊಂದಲವಾಗಿದ್ದು, ಆಡಿಕೆ ಬೆಳೆಗಾರರ ಆತ್ಮ ಸೈರ್ಯಕುಗ್ಗುವುದು ಬೇಡ, ಅಡಿಕೆ ಧಾರಣೆ ಇಳಿಕೆ ಗೊಂದಲ ಬೇಡ ಎಂದು ಕ್ಯಾಂಪ್ಕೋ ಸಂಸ್ಥೆ ತಿಳಿಸಿದೆ.
ಉತ್ತರ ಭಾರತದಲ್ಲಿ ನಮ್ಮ ಚಾಲಿ ಅಡಿಕೆಗೆ ಉತ್ತಮ ಬೇಡಿಕೆ ಇದ್ದು, ಧಾರಣೆ ಕುಸಿಯುವ ಯಾವ ಕಾರಣವು ಇಲ್ಲ, ಹಾಗೂ ಕ್ಯಾಂಪ್ಕೋ ಅಡಿಕೆ ಬೆಳೆಗಾರರ ಹಿತ ಕಾಪಾಡುವಲ್ಲಿ ಹಾಗೂ ಪ್ರಾಮಾಣಿಕ ಸೇವೆ ನೀಡುವಲ್ಲಿ ಕಟಿಬದ್ಧರಾಗಿದ್ದೇವೆ. ಅಡಿಕೆ ಸೇಟುಗಳು ಹಾಗೂ ವ್ಯಾಪಾರಿಗಳಿಗೆ ಅವರ ಹಿತಾಸಕ್ತಿ ಮುಖ್ಯವೇ ಹೊರತು ರೈತರ ಕಾಳಜಿ ಇರುವುದಿಲ್ಲ. ಅವರುಗಳು ಹೇಳಿದಂತೆ ವಿದೇಶಿ ಅಡಿಕೆ ಗುಣಮಟ್ಟದಲ್ಲಿಯಾಗಲಿ, ದರದಲ್ಲಿಯೂ ನಮ್ಮ ಅಡಿಕೆಗೆ ಸರಿಸಾಟಿ ಅಲ್ಲ. ಅಡಿಕೆ ಬೆಳೆಗಾರರು ಯಾವೂದೇ ಕಾರಣಕ್ಕೆ ಈ ವದಂತಿಗಳಿಗೆ ಮಣಿಯದೇ, ತಮಗೆ ಅಗತ್ಯವಿರುವಷ್ಟು ಅಡಿಕೆಯನ್ನು ಹಂತ ಹಂತವಾಗಿ ಕ್ಯಾಂಪ್ಕೋ ಸಂಸ್ಥೆ ಹಾಗೂ ಸಹಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಬೇಕಾಗಿ ಕ್ಯಾಂಪ್ಕೋ ವಿನಂತಿಸುತ್ತೇನೆ.
ಈಗಾಗಲೆ ಚೋಲ್ ಅಡಿಕೆ ದರ ಹೆಚ್ಚಾಗಿದ್ದು, ಮಳೆಯಿಂದಾಗಿ ಹೊಸ ಅಡಿಕೆ ಗುಣಮಟ್ಟ ಸುಧಾರಣೆ ಆದಾಗ ಇನ್ನು ಹೆಚ್ಚಿನ ದರ ನಮ್ಮ ರೈತರಿಗೆ ಖಂಡಿತಾ ಸಿಗುತ್ತದೆ ಎಂಬ ಬರವಸೆ ಇದೆ. ದಯವಿಟ್ಟು ರೈತರು ಯಾವೂದೇ ಕಾರಣದಿಂದ ತಮ್ಮ ಹೆಸರಿನಲ್ಲಿ ವ್ಯಾಪಾರಿಗಳ ಕಳಪೆ ಗುಣಮಟ್ಟದ ಅಡಿಕೆಯನ್ನು ತಮ್ಮ ಉತ್ತಮ ಗುಣಮಟ್ಟದ ಅಡಿಕೆಯೊಂದಿಗೆ ಮಿಶ್ರಣ ಮಾಡಿ ಕ್ಯಾಂಪ್ಕೋ ಸಂಸ್ಥೆೆ ನೀಡಬಾರದಾಗಿ ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್‌ಕುಮಾರ್‌ಕೊಡ್ಗಿ ತಿಳಿಸಿದ್ದಾರೆ.