ಹುಬ್ಬಳ್ಳಿ : ಕೆಲಸಗಳನ್ನು ಕಷ್ಟಪಟ್ಟು ಮಾಡದೇ ಇಷ್ಟಪಟ್ಟು ಮಾಡಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಇಲ್ಲಿನ ಚೇತನ ಬಿಸಿನೆಸ್ ಸ್ಕೂಲ್ನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗ ಮೇಳದ ಮೂಲಕ ಯುವಕರಿಗೆ ಉದ್ಯೋಗ ಪಡೆಯಲು ಸಹಾಯ ಮಾಡುತ್ತಿರುವ ಮಹಾವಿದ್ಯಾಲಯದ ಕಾರ್ಯ ಶ್ಲಾಘನೀಯ ಎಂದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಅಡೆತಡೆಗಳನ್ನು ಮೀರಿ ಗುರಿ ಸಾಧಿಸುವ ಛಲ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಮಾಡುವ ಕೆಲಸದಲ್ಲಿಯೇ ಖುಷಿ, ಸಂತೋಷ ಕಾಣಬಹುದೇ ಹೊರತು ಹೊರಗಿನ ಜಗತ್ತಿನಲ್ಲಿ ಅಲ್ಲ ಎಂದರು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಅಧ್ಯಕ್ಷತೆ ವಹಿಸಿದ್ದರು. ಚೈತ್ರಾ ಬಾದಾಮಿ, ಡಾ. ರಮಾಕಾಂತ ಕುಲಕರ್ಣಿ ಹಾಗೂ ಇತರರು ಇದ್ದರು.
ಡಾ. ವಿ.ಎಂ. ಕೊರವಿ ಮಾತನಾಡಿ, ಕೆಲಸ ಕೊಡುವ ಕಂಪನಿಗಳಲ್ಲಿ ನಿಷ್ಠೆಯಿಂದ ಇರುವಂತೆ ತಿಳಿಸಿದರು.
ಉದ್ಯೋಗ ಮೇಳದಲ್ಲಿ 20 ಕ್ಕೂ ಹೆಚ್ಚು ಕಂಪನಿಗಳು ಹಾಗೂ 500 ಕ್ಕೂ ಹೆಚ್ಚು ಉದ್ಯೋಗಾಸಕ್ತರು ಭಾಗವಹಿಸಿದ್ದರು.
ಡಾ. ಎಂ.ಎನ್. ಮಾಣಿಕ ಪರಿಚಯಿಸಿದರು, ಪ್ರೊ. ಭಾರತಿ ಮತ್ತು ಪ್ರೊ. ನಿಧಿ ದೇಶಪಾಂಡೆ ನಿರೂಪಿಸಿದರು. ಅರುಣ ರಜಪೂತ ವಂದಿಸಿದರು.