ಗಂಗಾವತಿ ತಾಲೂಕಿನ ಮರಳಿಯ ಎಂಎಸ್‌ಎಂಎಸ್ ಸಮೂಹ ಶಿಕ್ಷಣ ಶಿಕ್ಷಣ ಸಂಸ್ಥೆ ಪಿಯುಸಿ ಮತ್ತು ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಾಗತ ಮತ್ತು ಬೀಳ್ಕೊಡುಗೆ ಕಾರ್ಯಕ್ರಮವನ್ನು ಸಂಸ್ಥಾಪಕ ಅಧ್ಯಕ್ಷ ಎಚ್.ಎಂ.ಸಿದ್ದರಾಮಯ್ಯಸ್ವಾಮಿ ಭಾನುವಾರ ಉದ್ಘಾಟಿಸಿದರು. ವಿವಿಧ ಕಾಲೇಜಿನ ಪ್ರಾಚಾರ್ಯರಾದ ಹುಸೇನ್ ಪೀರಾ, ಅಬ್ದುಲ್ ಖಾದರ್ ಜೀಲಾನಿ ಇತರರಿದ್ದರು. 
ಜಿಲ್ಲೆ

ಸಮಯ ವ್ಯರ್ಥವಾಗಿ ಹಾಳುಮಾಡದಿರಿ

ರುದ್ರಪ್ಪ ವಾಲಿ

ಗಂಗಾವತಿ: ವಿಧೇಯತೆ ಮತ್ತು ವಿನಯತೆಯಿಂದ ಕಲಿಕೆಯತ್ತ ಗಮನಹರಿಸಬೇಕಿದ್ದು, ಸಾಧಕರ ಪಟ್ಟಿಯಲ್ಲಿ ಹೆಸರು ಪಡೆಯುವಂತೆ ಜಿಪಂ ಮಾಜಿ ಸದಸ್ಯ ಹಾಗೂ ಎಂಎಸ್‌ಎಂಎಸ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ಎಂ.ಸಿದ್ದರಾಮಯ್ಯಸ್ವಾಮಿ ಹೇಳಿದರು.

ಬೀಳ್ಕೊಡುಗೆ

ತಾಲೂಕಿನ ಮರಳಿಯ ಎಂಎಸ್‌ಎಂಎಸ್ ಸಮೂಹ ಶಿಕ್ಷಣ ಶಿಕ್ಷಣ ಸಂಸ್ಥೆ ಪಿಯುಸಿ ಮತ್ತು ಪದವಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಸ್ವಾಗತ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ವಿದ್ಯಾರ್ಥಿ ಜೀವನದಲ್ಲಿ ಶ್ರಮಪಟ್ಟು ಅಧ್ಯಯನ ಕೈಗೊಂಡರೆ ಭವಿಷ್ಯತ್ವದ ಏನಾದರೂ ಸಾಧನೆ ಮಾಡಲು ಸಾಧ್ಯ. ಎಲ್ಲ ಕ್ಷೇತ್ರದಲ್ಲೂ ಸಾಧನೆಯತ್ತ ಗಮನಹರಿಸಬೇಕಿದ್ದು, ಸಮಯ ವ್ಯರ್ಥವಾಗಿ ಹಾಳು ಮಾಡದಂತೆ ಸಲಹೆ ನೀಡಿದರು.


ಕಾಲೇಜಿನಿಂದ ನಿರ್ಗಮಿಸುತ್ತಿರುವ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉಪಾಧ್ಯಕ್ಷ ಎಚ್.ಎಂ.ಗುರುಪಾದಸ್ವಾಮಿ, ಕಾರ್ಯದರ್ಶಿ ಘನಮಠಸ್ವಾಮಿ, ಆಡಳಿತಾಧಿಕಾರಿ ಎಚ್.ಎಂ.ಬಸವರಾಜಸ್ವಾಮಿ, ಎಚ್.ಎಂ.ಮಲ್ಲಿಕಾರ್ಜುನ, ಮುಖ್ಯಶಿಕ್ಷಕರಾದ ಮೌನೇಶ ಬಡಿಗೇರ್, ಸಚ್ಚಿದಾನಂದ, ಅಮರಗುಂಡಯ್ಯಸ್ವಾಮಿ ಇತರರಿದ್ದರು.