ರಬಕ/ಬನಹಟ್ಟಿ : ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ, ನಮ್ಮ ನಮ್ಮ ವಾರ್ಡ್‌ಗಳಲ್ಲಿರುವ ಸರ್ಕಾರಿ ಶಾಲೆಗಳ ಬಗ್ಗೆ ಹೆಮ್ಮೆ ಇರಬೇಕೆಂದು ರಬಕವಿ-ಬನಹಟ್ಟಿ ನಗರಸಭೆ ಸದಸ್ಯೆ ಜಯಶ್ರೀ ಬಾಗೇವಾಡಿ ಹೇಳಿದರು.
ಬನಹಟ್ಟಿಯ ಸದಾಶಿವ ನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸಂಜೆ ಮುರಾರ್ಜಿ ವಸತಿ ಶಾಲೆಗೆ ಆಯ್ಕೆಯಾದ ನಿಸರ್ಗಾ ಶಿರೋಳ, ಭಾರತಿ ಭಜಂತ್ರಿ ಅವರ ಸಾಧನೆಗೆ ಕಾರಣರಾದ ಶಿಕ್ಷಕಿ ರಾಜಶ್ರೀ ದುತ್ತರಗಾವಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ಮುತುವರ್ಜಿ ವಹಿಸಿ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕೆಂದು ತಿಳಿಸಿದರು.
ಇದನ್ನೂ ಓದಿ: ನೋಡ ಬನ್ನಿ ಈ ಸರ್ಕಾರಿ ಶಾಲೆ..!
ಎಸ್‌ಡಿಎಂಸಿ ಅಧ್ಯಕ್ಷ ಕಾಡಪ್ಪ ಪಾಟೀಲ, ರಾಜೇಶ್ವರಿ ಹಿಪ್ಪರಗಿ, ರಾಜು ಯಾದವಾಡ, ಸಿದ್ದಪ್ಪ ಕಡ್ಲಿಮಟ್ಟಿ, ಚಿದಾನಂದ ಕೋಳಿ, ವೀಣಾ ಬಿಳ್ಳೂರ, ರಾಜು ಬಿಜ್ಜರಗಿ, ಅಪ್ಪು ರಾವಳ, ಗುರುಮಾತೆ ಪಿ.ಬಿ. ಆಲಗೂರ ಇತರರಿದ್ದರು.