ಜಿಲ್ಲೆ

ಆರ್​ಎಸ್​ಎಸ್​ ಬ್ಯಾನ್​ಗೆ ಕೈ ಹಾಕಬೇಡಿ

ದತ್ತಾತ್ರೇಯ ಪಿ ಕುಲಕರ್ಣಿ

ಗುಳೇದಗುಡ್ಡ : ಆರ್​ಎಸ್​ಎಸ್​ ಸ್ವಾತಂತ್ರ ಪೂರ್ವದಲ್ಲಿಯೇ ಪ್ರಾರಂಭವಾಗಿದ್ದು, ಯಾವುದೇ ರಾಜಕೀಯ ಲಾಭವಿಲ್ಲದೇ ಸೇವೆ ಮಾಡುತ್ತಿದೆ. ಇಂತಹ ಸಂಟನೆ ಬಗ್ಗೆ ಅಗೌರವದಿಂದ ನಡೆದುಕೊಳ್ಳುವುದು, ಟೀಕೆ ಮಾಡುವುದು ಸರಿಯಲ್ಲ ಮಾಜಿ ಶಾಸಕ ರಾಜಶೇಖರ ಶೀಲವಂತ ಆರೋಪಿಸಿದ್ದಾರೆ. ಈ ಕುರಿತು ಪ್ರಕಟನೆ ನೀಡಿರುವ ಅವರು, ಸಚಿವ ಪ್ರಿಯಾಂಕ್​ಸ ರ್ಖಗೆ ಅವರು ಆರ್​ಎಸ್​ಎಸ್​ ಶಾಖೆ ಸರ್ಕಾರಿ ಜಾಗೆಗಳಲ್ಲಿ ನಡೆಸದಂತೆ ನಿಷೇಧಕ್ಕೆ ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಸಂಪುಟ ಸಭೆಯಲ್ಲಿ ಆರ್​ಎಸ್​ಎಸ್​ ಹತ್ತಿಕ್ಕಲು ಆಲೋಚನೆ ಮಾಡಲಾಗಿದೆ. ಈ ಸಂಚು ಒಳ್ಳೆಯದಲ್ಲ. ಆರ್​ಎಸ್​ಎಸ್​ ಬ್ಯಾನ್​ಗೆ ಮುಂದಾದರೇ ಕೈ, ಮೈ ಸುಟ್ಟುಕೊಳ್ಳುವುದು ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾಜಿ ಶಾಸಕ ರಾಜಶೇಖರ ಶೀಲವಂತ