ಜಿಲ್ಲೆ

ಕಳಪೆ ಹಾಲು ಪೂರೈಸದಿರಿ

ತುಮಕೂರು ಡೆಸ್ಕ್

 ಎಂ.ಎನ್​.ಕೋಟೆ : ಕಳಪೆ ಹಾಲು ಪೂರೈಸುವುದನ್ನು ಬಿಟ್ಟು ಗುಣಮಟ್ಟದ ಹಾಲನ್ನು ಹಾಕಿ ಸಂದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅಧ್ಯ ಸುರೇಶ್​ ತಿಳಿಸಿದರು.

ಗುಬ್ಬಿ ತಾಲೂಕಿನ ಅದಲಗೆರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಂದ ಅಭಿವೃದ್ಧಿಗೆ ರೈತರು ಕೈಜೋಡಿಸಿದರೆ ಮಾತ್ರ ಅಭಿವೃದ್ಧಿಯಾಗುತ್ತದೆ. ಗುಣಮಟ್ಟದ ಹಾಲನ್ನು ಪ್ರತಿಯೊಬ್ಬರು ಹಾಕಿ ಹೆಚ್ಚು ಪೋತ್ಸಾಹ ಧನ ಪಡೆಯಬೇಕು. ಇತ್ತೀಚಿನ ದಿನಗಳಲ್ಲಿ ರೈತರು ಹೈನುಗಾರಿಕೆ ಮರೆತಿದ್ದಾರೆ. ಗ್ರಾಮೀಣ ಭಾಗದ ರೈತರು ಹಸುಗಳನ್ನು ಕಟ್ಟಿಕೊಂಡು ಡೇರಿಗಳಿಗೆ ಹಾಲುಹಾಕಿ ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು ಎಂದರು.

ಒಕ್ಕೂಟದಿಂದ ಬರುವ ಸೌಲಭ್ಯಗಳನ್ನು ರೈತರಿಗೆ ತಲುಪಿಸುತ್ತೇವೆ. ಹಾಲು ಹಾಕುವ ರೈತರಿಗೆ ಈ ವರ್ಷ ಬೋನಸ್​ ಬಂದಿದೆ. ರೈತರು ಒಳ್ಳೆಯ ಕೆಲಸಗಳಿಗೆ ಬಳಸಿಕೊಳಬೇಕು. ಪ್ರತಿಯೊಬ್ಬ ರೈತರು ಹಸುಗಳನ್ನು ಕಟ್ಟಿಕೊಂಡು ಗುಣಮಟ್ಟದ ಹಾಲನ್ನು ಹಾಕಬೇಕು. ಜತೆಗೆ ರಾಸುಗಳು ಮೃತಪಟ್ಟರೆ 50 ಸಾವಿರ ರೂ.ಗಳನ್ನು ಕೊಡುತ್ತೇವೆ. ಹಾಲು ಹಾಕುವ ರೈತರು ಮೃತಪಟ್ಟರೆ 50ಸಾವಿರ ರು. ಕೊಡಲಾಗುತ್ತದೆ ಎಂದರು.