ಸರ್ಜಾಪುರ : ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ಭೂಸ್ವಾಧಿನದ ವಿರುದ್ಧ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪದ ಅಧ್ಯ ರವಿಕೃಷ್ಣಾರೆಡ್ಡಿ ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಭೂಸ್ವಾಧಿನದ ಹೆಸರಿನಲ್ಲಿ ರೈತರ ಬದುಕು ಹಾಳು ಮಾಡುವುದು ಸರಿಯಲ್ಲ. ರೈತರು ನಾಡು&ನುಡಿಗಾಗಿ ಹೋರಾಟ ನಡೆಸುತ್ತಿರುವ ಈ ಸಮಯದಲ್ಲಿ ಪ್ರತಿಯೊಬ್ಬ ನಾಗರಿಕರು ರೈತರೊಂದಿಗೆ ಕೈ ಜೋಡಿಸಿ ಬೆಂಬಲ ಸೂಚಿಸುವುದು ಆದ್ಯ ಕರ್ತವ್ಯ ಎಂದು ರವಿಕೃಷ್ಣಾರೆಡ್ಡಿ ಹೇಳಿದರು. ಆನೇಕಲ್ ತಾಲೂಕು ಭೂ ಸ್ವಾಧಿನ ವಿರೋಧಿ ಹೋರಾಟ ಸಮಿತಿ ಸದಸ್ಯ ಆರ್.ಕೇಶವ್ ಮಾತನಾಡಿ, ರೈತರ ಹೋರಾಟಕ್ಕೆ ಪ್ರತಿದಿನ ವಿವಿಧ ಸಂಟನೆಗಳು ಮತ್ತು ರಾಜಕೀಯ ನಾಯಕರು ಬೆಂಬಲ ನೀಡುತ್ತಿರುವುದು ಹೊಸ ಶಕ್ತಿ ತುಂಬಿದಂತಾಗಿದೆ. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದರು.
ಜೈ ಭೀಮ್ ಜನ ಜಾಗೃತಿ ಸಂಟನೆ ಅಧ್ಯ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ ಮಾತನಾಡಿ, ಮುಂದಿನ ದಿನಗಳಲ್ಲಿ ಆನೇಕಲ್ ತಾಲೂಕಿನಾದ್ಯಂತ ರಾಷ್ಟ್ರ ಮತ್ತು ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡುತ್ತೇವೆ. ಹಾಗಾಗಿ ಈ ಕೂಡಲೇ ರಾಜ್ಯ ಸರ್ಕಾರದ ಪ್ರತಿನಿಧಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಭೂ ಸ್ವಾಧಿನ ಪ್ರಕ್ರಿಯೆ ಕೈಬಿಡಬೇಕು ಎಂದು ಎಚ್ಚರಿಕೆ ನೀಡಿದರು.
ಕೆಆರ್ಎಸ್ ಪದ ಬೆಂಗಳೂರು ನಗರ ಜಿಲ್ಲಾ ಉಪಾಧ್ಯ ಮಹೇಶ್ ರೆಡ್ಡಿ, ಆನೇಕಲ್ ತಾಲೂಕು ಅಧ್ಯ ವಿಜಯ ರೆಡ್ಡಿ, ಪ್ರಧಾನ ಕಾರ್ಯದರ್ಶಿ ದೊಮ್ಮಸಂದ್ರ ಹರೀಶ್, ಉಪಾಧ್ಯ ವಸುಂಧರ್, ಶಿವಕುಮಾರ್, ಕಾರ್ಯದರ್ಶಿ ವೆಂಕಟೇಶ್ ರೆಡ್ಡಿ, ರವಿಶಂಕರ್, ಪದ್ಮಮ್ಮ, ಆನೇಕಲ್ ತಾಲೂಕು ಭೂಸ್ವಾಧಿನ ವಿರೋಧಿ ಹೋರಾಟ ಸಮಿತಿಯ ವಿಶ್ವನಾಥ್ ರೆಡ್ಡಿ, ಆರ್.ಕೃಷ್ಣರೆಡ್ಡಿ, ಬಿಕ್ಕನಹಳ್ಳಿ ಆರ್.ಅಶೋಕ್, ಸುನೀಲ್, ನಾಗೇಶ್, ಬಸವರಾಜು, ಪರಶುರಾಮ್, ಮಂಜುನಾಥ್, ಪವನ್, ಬಾಬು ಪ್ರಸಾದ್, ಸೋಮಶೇಖರ್ ರೆಡ್ಡಿ, ಜಯರಾಮ್ ಸರ್ಜಾ, ರಾಜೇಶ್, ಪ್ರತಾಪ್, ನವೀನ್, ಮಧುಸೂಧನ್ ರೆಡ್ಡಿ, ಜೀವನ್ ರೆಡ್ಡಿ ಇತರರು ಇದ್ದರು.