ಹಟ್ಟಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಸಂದರ್ಭ ಪಿಡಿಒ ರತ್ನವ್ವ, ಪ್ರಮುಖರಾದ ಯಮುನಾ, ನಿಂಗನಗೌಡ, ಗುಡದಪ್ಪ, ವಸಂತ, ಗವಿಸಿದ್ದಪ್ಪ, ದೇವೇಂದ್ರಪ್ಪ, ಮಂಜುಳಾ ಜುನಾಬೀ ಇತರರು ಇದ್ದರು. 
ಜಿಲ್ಲೆ

ಹೆಣ್ಣುಮಕ್ಕಳನ್ನು ಕಷ್ಟಕ್ಕೆ ತಳ್ಳದಿರಿ

ಅಳವಂಡಿ: ಹಳ್ಳಿಗಳಲ್ಲಿ ಜೀವಂತ ಇರುವ ಬಾಲ್ಯ ವಿವಾಹ ಪದ್ಧತಿ, ಲಿಂಗ ತಾರತಮ್ಯ ನೀತಿ ಸೇರಿದಂತೆ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘಗಳು ಕೈಜೋಡಿಸಬೇಕು ಎಂದು ಕೊಪ್ಪಳದ ಸಖಿ ಒನ್ ಘಟಕದ ಆಡಳಿತಾಧಿಕಾರಿ ಯಮುನಾ ತಿಳಿಸಿದರು.
ಹಟ್ಟಿ ಗ್ರಾಮದಲ್ಲಿ ಕರ್ನಾಟಕ ಆರೋಗ್ಯ ಸಂವರ್ದನಾ ಪ್ರತಿಷ್ಟಾನದ (ಕೆಎಚ್‌ಪಿಟಿ) ಸ್ಫೂರ್ತಿ ಯೋಜನೆಯಿಂದ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದರು.

ಪಾಲಕರು ಬಾಲ್ಯ ವಿವಾಹ ಮಾಡಿ ಹೆಣ್ಣು ಮಕ್ಕಳ ಜೀವನವನ್ನು ಕಷ್ಟಕ್ಕೆ ತಳ್ಳಬಾರದು. ಹೆಣ್ಣುಮಕ್ಕಳ ಆರೋಗ್ಯ ಹಾಗೂ ಶಿಕ್ಷಣದ ಕಾಳಜಿ ವಹಿಸಬೇಕು ಎಂದರು.

ಉಪಾಧ್ಯಕ್ಷ ನಿಂಗನಗೌಡ ಪಾಟೀಲ ಮಾತನಾಡಿ, ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧಗೊಳಿಸಲು ಅವರಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು. ಪ್ರತಿ ಹೆಣ್ಣು ಮಕ್ಕಳು ದೈಹಿಕ-ಮಾನಸಿಕವಾಗಿ ಸದೃಢವಾಗಿರಬೇಕು. ಅಲೋಚನೆಗಳು ದೂರದೃಷ್ಟಿ ಹೊಂದಿರಬೇಕು ಎಂದರು. ಪಿಡಿಒ ರತ್ನವ್ವ, ಶಿಕ್ಷಕಿ ಮಂಜುಳಾ ಮಾತನಾಡಿದರು.

ಎಸ್‌ಡಿಎಮ್‌ಸಿ ಅಧ್ಯಕ್ಷ ಗುಡದಪ್ಪ ಚಿಲವಾಡಗಿ, ಆರೋಗ್ಯ ನೀರಿಕ್ಷಣಾಧಿಕಾರಿಗಳಾದ ವಸಂತ ಗದ್ದಿಕೇರಿ, ಗವಿಸಿದ್ದಪ್ಪ ಗೊಂದಿಹೊಸಳ್ಳಿ, ಪ್ರಮುಖರಾದ ದೇವೇಂದ್ರಪ್ಪ ಕರಿಗಾರ, ನಿಂಗನಗೌಡ ಗೌಡ್ರ, ಹನುಮಗೌಡ, ಗವಿಸಿದ್ದಪ್ಪ, ಜುನುಸಾಬ, ಮಂಜುಳಾ, ಗೊರಪ್ಪ ಮುದ್ದಾಬಳ್ಳಿ, ಲೋಹಿತ್, ಕೆಎಚ್‌ಪಿಟಿಯ ಸಮುದಾಯ ಸಂಘಟಕಿ ಜುನಾಬೀ ವಡ್ಡಟ್ಟಿ ಇತರರು ಇದ್ದರು.