ಪಾಂಡವಪುರ ತಾಲೂಕಿನ ಮಂಡಿಬೆಟ್ಟಹಳ್ಳಿ ಗ್ರಾಮದಲ್ಲಿ ನಡೆಸ ಬಸವ ಜಯಂತಿ ಕಾರ್ಯಕ್ರಮದಲ್ಲಿ ಹಲವರನ್ನು ಗೌತವಿಸಿ ಸನ್ಮಾನಿಸಲಾಯಿತು. ಶಿವಬಸವ ಸ್ವಾಮೀಜಿ, ಎಂ.ಎಸ್.ಮಂಜುನಾಥ್ ಇತರರು ಇದ್ದರು. 
ಜಿಲ್ಲೆ

ಮಹನೀಯರನ್ನು ಜಾತಿಗೆ ಸೀಮಿತ ಮಾಡದಿರಿ

ವಸಂತಕುಮಾರ್ ಬಿ

ಪಾಂಡವಪುರ: ಬುದ್ಧ, ಬಸವ, ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಜಾತಿ, ಧರ್ಮಕ್ಕೆ ಸೀಮಿತಗೊಳಿಸಬಾರದು. ಬಸವಣ್ಣ ೧೨ನೇ ಶತಮಾನದಲ್ಲೇ ಸಮಾನತೆಯ ಬೀಜ ಬಿತ್ತಿದವರು ಎಂದು ತಾಲೂಕಿನ ಬೇಬಿ ಬೆಟ್ಟದ ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ ಹೇಳಿದರು.

ತಾಲೂಕಿನ ಮಂಡಿಬೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇವಾಲಯಗಳಿಗೆ ಮುಕ್ತ ಪ್ರವೇಶ ಇಲ್ಲದ ಕಾಲಘಟ್ಟದಲ್ಲಿ ಗಂಡು, ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರಿಗೂ ಸರಿ ಸಮಾನವಾಗಿ ಇಷ್ಟ ಲಿಂಗ ಧಾರಣೆ ಮಾಡುವ ಮೂಲಕ ಲಿಂಗಾಯತ ಧರ್ಮ ಸ್ಥಾಪಿಸಿದರು. ಕಾಯಕವೇ ಕೈಲಾಸ ಎಂದು ಕಾಯಕದ ಮಹತ್ವ ತಿಳಿಸಿಕೊಟ್ಟರು. ಹೀಗಾಗಿ ಪ್ರತಿಯೊಬ್ಬರು ಬುದ್ಧ, ಬಸವಣ್ಣನವರ ತತ್ವ, ಸಿದ್ಧಾಂತಗಳ ಹಾದಿಯಲ್ಲಿ ನಡೆಯಬೇಕು ಎಂದು ತಿಳಿಸಿದರು.

ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್ ಮಾತನಾಡಿ, ಬಸವಣ್ಣನವರು ೭೭೦ ಶರಣರನ್ನು ಒಗ್ಗೂಡಿಸಿ ನಡೆಸುತ್ತಿದ್ದ ಅನುಭವ ಮಂಟಪ ಇಂದಿನ ಪಾರ್ಲಿಮೆಂಟ್ ಆಗಿದೆ. ಕಸ ಗೂಡಿಸುವ ಸತ್ಯಕ್ಕ, ಸಂಕವ್ವನಿಂದ ಮೇರುಪರ್ವತ ಅಲ್ಲಮ ಪ್ರಭುಗಳು ಒಳಗೊಂಡಂತೆ ನೂರಾರು ಶರಣರು ಒಂದೇ ಸೂರಿನಲ್ಲಿ ಕುಳಿತು ಲೋಕ ಕಲ್ಯಾಣದ ಅನೇಕ ವಿಚಾರಗಳನ್ನು ಚರ್ಚಿಸುತ್ತಿದ್ದರು. ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಆನಂದ್, ತಾಲೂಕು ಅಧ್ಯಕ್ಷ ಶಿವಕುಮಾರ್, ಮಾದಪ್ಪ, ಪಟೇಲ್ ಶಂಭುಲಿಂಗಪ್ಪ, ಹೊನ್ನೇನಳ್ಳಿ ಜಯಣ್ಣ, ಡಿಎಸ್‌ಎಸ್ ಮುಖಂಡ ಅಂಕಯ್ಯ, ಮೀನಾಕ್ಷಿ ಮಾದಪ್ಪ ಗ್ರಾಮ ಪಂಚಾಯಿತಿ ಸದಸ್ಯ ಕಾಂತರಾಜ್, ಜಯಣ್ಣಚಾರಿ, ಎಂ.ಶಿವಕುಮಾರ್, ಲೋಕೇಶ, ವೆಂಕಟೇಶ್ ಇತರರು ಇದ್ದರು.