ಸರ್ಜಾಪುರ ರಸ್ತೆಯ ಸೂಲಿಕುಂಟೆಯಲ್ಲಿ ಹಮ್ಮಿಕೊಂಡಿದ್ದ ಪಿಆರ್​ಆರ್​ ರೈತ ಹಾಗೂ ನಿವೇಶನದಾರರ ಸಂದ ಸಭೆಯಲ್ಲಿಸಂದ ಅಧ್ಯ ಮಾವಳ್ಳಿಪುರ ಬಿ. ಶ್ರೀನಿವಾಸ್​, ಉಪಾಧ್ಯ ಗೋವಿಂದರಾಜ್​, ರೈತ ಮುಖಂಡ ಸೂಲಿಕುಂಟೆ ಶ್ರೀಧರ್​ ರೆಡ್ಡಿ ಇದ್ದರು. 
ಜಿಲ್ಲೆ

ಸಂಧಾನ ಸೂತ್ರಕ್ಕೆ ಮಣಿಯೋದು ಬೇಡ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಸರ್ಜಾಪುರ : ಬೆಂಗಳೂರು ಬಿಜಿನೆಸ್​ ಕಾರಿಡಾರ್​ ರಸ್ತೆ ಹಾದು ಹೋಗುವ 73 ಹಳ್ಳಿಗಳ ಗ್ರಾಮಗಳ ರೈತರನ್ನು ಬಿಡಿಎ ಸಂಧಾನ ಸೂತ್ರ ಸಭೆಗಳಿಗೆ ಆಹ್ವಾನಿಸಿದ್ದು, ರೈತರು ಹಾಜರಾಗಿ ವಿರೋಧ ವ್ಯಕ್ತ ಪಡಿಸಬೇಕು ಮತ್ತು ಹೊಸ ಭೂಸ್ವಾಧಿನ ಕಾಯ್ದೆ 2013ರಂತೆ ಪರಿಹಾರ ಮತ್ತು ಮರುವಸತಿ ನೀಡಬೇಕು. ಇಲ್ಲದಿದ್ದಲ್ಲಿ, ಸದರಿ ಜಮೀನುಗಳಿಗೆ ಎನ್​ಒಸಿ ಕೊಡಲು ಆಗ್ರಹಿಸಬೇಕೆಂದು ಪೆರಿೆರಲ್​ ರಿಂಗ್​ ರೋಡ್​ ರೈತ ಹಾಗೂ ನಿವೇಶನದಾರರ ಸಂದ ಅಧ್ಯ ಮಾವಳ್ಳಿಪುರ ಬಿ.ಶ್ರೀನಿವಾಸ್​ ಹೇಳಿದರು.

ಸರ್ಜಾಪುರ ರಸ್ತೆಯ ಸೂಲಿಕುಂಟೆ ಕನ್ವೆನ್ಷನ್​ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಿಆರ್​ಆರ್​ ರೈತ ಹಾಗೂ ನಿವೇಶನದಾರರ ಸಂದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾನೂನು ಹೋರಾಟವನ್ನು ತೀವ್ರಗೊಳಿಸಬೇಕು. ಕಳೆದ ಎರಡು ತಿಂಗಳಿಂದೀಚೆಗೆ ಬಿಡಿಎ ಅಧಿಕಾರಿಗಳು, ಕೆಲ ರಾಜಕಾರಣಿಗಳು, ರಿಯಲ್​ ಎಸ್ಟೇಟ್​ ಉದ್ಯಮಿಗಳು, ದಲ್ಲಾಳಿಗಳು, ರೈತರು ಮತ್ತು ನಿವೇಶನದಾರರನ್ನು ಬೆದರಿಸಿ ಸುಳ್ಳು ಭರವಸೆ ನೀಡಿ ಸಂಧಾನಿತ ಸೂತ್ರ ಪತ್ರಕ್ಕೆ ಬಲವಂತವಾಗಿ ಸಹಿ ಮಾಡಿಸಿಕೊಳ್ಳಲು ಮುಂದಾಗಿರುವುದು ಗಮನಕ್ಕೆ ಬಂದಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಹೈಕೋರ್ಟ್​ನಲ್ಲಿ ನೂರಾರು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಹೀಗಿರುವಾಗ ಸಂಧಾನ ಸೂತ್ರ ಪ್ರಕ್ರಿಯೆ ನಡೆಸುತ್ತಿರುವ ಬಿಡಿಎ ಕ್ರಮಕ್ಕೆ ನಮ್ಮ ವಿರೋಧವಿದೆ ಎಂದರು.

ಸಂದ ಉಪಾಧ್ಯ ಗೋವಿಂದರಾಜ್​ ಮಾತನಾಡಿ, ಕಾರಿಡಾರ್​ ನಿರ್ಮಾಣಕ್ಕೆ ರೈತರಿಂದ ವಿರೋಧವಿಲ್ಲ. ಕೇಂದ್ರ ಸರ್ಕಾರದ ಹೊಸ ಭೂ ಸ್ವಾಧಿನ ಕಾಯ್ದೆ 2013 ರಂತೆ ಪರಿಹಾರ ಕಲ್ಪಿಸಬೇಕು. ಈ ಬಗ್ಗೆ ಸರ್ಕಾರ ಪಾರದರ್ಶಕವಾಗಿ ೂಷಣೆ ಮಾಡಬೇಕು ಎಂದು ಆಗ್ರಹಿಸಿದರು. 2013 ಭೂಸ್ವಾಧಿನ ಕಾಯ್ದೆಯನ್ನು ಸದರಿ ಯೋಜನೆಗೆ ಅಳವಡಿಸಿಕೊಳ್ಳುವಂತೆ ಬಿಡಿಎಗೆ ನಿರ್ದೇಶನ ನೀಡುವಂತೆ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಬೇಕು. ರಾಜ್ಯ ಸರ್ಕಾರ ಈ ಯೋಜನೆಗೆ ಭೂ ಸ್ವಾಧಿನಕ್ಕೊಳಪಡುವ ಸಂತ್ರಸ್ತರಿಗೆ ನೀಡುವ ಪರಿಹಾರ ಧನವನ್ನು ಬಹಿರಂಗವಾಗಿ ಪ್ರಕಟಿಸುವುದು ಸೇರಿ ಅನೇಕ ಸಲಹೆಗಳನ್ನು ರೈತರು ಸಭೆಯ ಮುಂದಿಟ್ಟರು.

ಉಪಾಧ್ಯರಾದ ಗೋವಿಂದರಾಜ್​, ಗೌತಮ್​ ಚಂದ್​ ಜೈನ್​, ಪ್ರಧಾನ ಕಾರ್ಯದರ್ಶಿ ರು, ಖಜಾಂಚಿ ನರಸಿಂಹ ಮೂರ್ತಿ, ರೈತ ಮುಖಂಡರಾದ ಸೂಲಿಕುಂಟೆ ಶ್ರೀಧರ್​ ರೆಡ್ಡಿ, ಮುಳ್ಳೂರು ಕೃಷ್ಣ, ಗೋಪಾಲ ರೆಡ್ಡಿ, ಶಿವಪ್ರಸಾದ್​ ಸೇರಿದಂತೆ ನೂರಾರು ರೈತರು, ನಿವೇಶನದಾರರು ಭಾಗವಹಿಸಿದ್ದರು.