ಎಂವಿ ಬಡಾವಣೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶ್ರೀ ಧರ್ಮಸ್ಥಳ ಮಂಜುನಾಥ ಹೊಸಕೋಟೆ ಸೇವಾ ಬಳಗ ಟ್ರಸ್ಟ್​ನಿಂದ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಟ್ರಸ್ಟ್​ ಖಜಾಂಚಿ ಆನಂದ್​ ಕುಮಾರ್​, ಕಾರ್ಯದರ್ಶಿ ಸೋಮಶೇಖರ್​, ಸದಸ್ಯರಾದ ನಟರಾಜು, ರಾಜಣ್ಣ, ರಾಮಾಂಜಿನಿ ಇದ್ದರು. 
ಜಿಲ್ಲೆ

ಸರ್ಕಾರಿ ಶಾಲೆಗಳೆಂದರೆ ಕೀಳರಿಮೆ ಬೇಡ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಹೊಸಕೋಟೆ : ಸರ್ಕಾರಿ ಶಾಲೆಗಳೆಂದರೆ ಪಾಲಕರಲ್ಲಿ ಒಂದು ರೀತಿ ಕೀಳರಿಮೆ ಇದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳೇ ಇಂದಿಗೆ ಪುಣ್ಯವಂತರಾಗಿದ್ದು, ಸರ್ಕಾರಿ ಶಾಲೆಯಲ್ಲಿ ಓದಿ ಸಾಧನೆ ಮಾಡಿದರೆ ಇತಿಹಾಸ ಸೃಷ್ಟಿ ಮಾಡಿದಂತೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥ ಹೊಸಕೋಟೆ ಸೇವಾ ಬಳಗ ಟ್ರಸ್ಟ್​ ಅಧ್ಯಕ್ಷ ಮಂಜುನಾಥ್​ ಹೇಳಿದರು. ನಗರದ ಎಂವಿ ಬಡಾವಣೆಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶ್ರೀ ಧರ್ಮಸ್ಥಳ ಮಂಜುನಾಥ ಹೊಸಕೋಟೆ ಸೇವಾ ಬಳಗ ಟ್ರಸ್ಟ್​ನಿಂದ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆ ಮಕ್ಕಳ ಅಭ್ಯುದಯಕ್ಕೆ ಟ್ರಸ್ಟ್​ ಕಾರ್ಯಪ್ರವೃತ್ತರಾಗಿದ್ದು, ದುಡಿಮೆಯ ಹಣದಿಂದ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ ಮಾಡಲಾಗುತ್ತಿದೆ. ಈ ಬಾರಿ 6 ಸಾವಿರ ನೋಟ್​ ಬುಕ್​ಗಳನ್ನು ನೀಡಿದ್ದೇವೆ ಎಂದರು. ನಿವೃತ್ತ ಮುಖ್ಯಶಿಕ್ಷಕಿ ವಿಜಯಮ್ಮ ಮಾತನಾಡಿ, 1985&-86ರಲ್ಲಿ ಕೇವಲ ಒಂದು ಕೊಠಡಿಯಿಂದ ಪ್ರಾರಂಭವಾಗಿ ದೊಡ್ಡ ಶಾಲೆಯಾಗಿ ನಿಮಾರ್ಣವಾಗಿದೆ. ವಿದ್ಯಾರ್ಥಿಗಳು ಕೇವಲ ಕುಟುಂಬ ನಿರ್ವಹಣೆಗೆ ಶಿಕ್ಷಣ ಪಡೆಯದೆ ದೇಶಕ್ಕಾಗಿ ಏನಾದರೂ ಕೊಡುಗೆ ನೀಡುವಂತಹ ಸತ್ಪಜೆಗಳಾಗಿ ರೂಪುಗೊಳ್ಳಬೇಕು ಎಂದರು. ಮಧು, ಈರಣ್ಣ, ಮನೋಹರ್​ ಮುಖ್ಯ ಶಿಕ್ಷಕಿ ಲಕ್ಷ್ಮೀ ಇದ್ದರು.