ಜಿಲ್ಲೆ

ರೇಬಿಸ್ ರೋಗದ ಬಗ್ಗೆ ಉದಾಸೀನ ಬೇಡ; ಡಾ.ಆರ್.ವೆಂಕಟೇಶ್

ಮಡಿಕೇರಿ: ರೇಬಿಸ್ ರೋಗದ ಬಗ್ಗೆ ಉದಾಸೀನ ಮಾಡದೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಕಿವಿಮಾತು ಹೇಳಿದರು.


ಜಿಲ್ಲಾಡತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ರೇಬಿಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ರೇಬಿಸ್ ಒಂದು ರೋಗವಾಗಿದ್ದು, ಖ್ಯಾತ ವಿಜ್ಞಾನಿ ಲೂಯಿಸ್ ಪ್ಯಾಶ್ಚರ್ ಅವರು ರೇಬಿಸ್ ರೋಗ ನಿರೋಧಕ ಲಸಿಕೆಯನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದಾರೆ. ಇವರ ಮರಣದ ದಿನವಾದ ಸೆ೨೮ ರಂದು ವಿಶ್ವ ರೇಬಿಸ್ ದಿನಾಚರಣೆ ಆಚರಿಸಲಾಗುತ್ತಿದೆ. ರೇಬಿಸ್ ರೋಗಕ್ಕೆ ರೋಗ ಬರುವ ಮೊದಲೇ ರೋಗ ನಿರೋಧಕ ಲಸಿಕೆ ಹಾಕಿಸಬೇಕು. ಬಂದ ನಂತರ ಹಾಕಿಸಿದರೆ ಪ್ರಯೋಜನವಿಲ್ಲ. ಎಲ್ಲರೂ ರೇಬಿಸ್ ರೋಗದ ಬಗ್ಗೆ ಉದಾಸೀನ ಮಾಡದೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು. ೧೫ ವ?ರ್ದ ಒಳಗಿನ ಮಕ್ಕಳು ನಾಯಿ ಕಡಿತಕ್ಕೆ ಹೆಚ್ಚಾಗಿ ತುತ್ತಾಗುತ್ತಾರೆ ಹಾಗೂ ಕೊಡಗು ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ರೇಬಿಸ್ ಪ್ರಕರಣಗಳು ಕಂಡು ಬಂದಿರುವುದಿಲ್ಲ ಎಂದು ತಿಳಿಸಿದರು.


ಮಡಿಕೇರಿ ತಾಲೂಕು ಆರೋಗ್ಯಾಧಿಕಾರಿ ಡಾ.ಚೇತನ್ ಮಾತನಾಡಿ, ರೇಬಿಸ್ ರೋಗದಿಂದ ಜಾಗತಿಕವಾಗಿ ೫೫ ಲಕ್ಷ ಜನ ಸಾಯುತ್ತಿದ್ದು, ನಮ್ಮ ದೇಶದಲ್ಲಿ ಸುಮಾರು ೨೦ ಸಾವಿರ ಜನ ಸಾವನ್ನಪುತ್ತಿದ್ದಾರೆ. ಅಲ್ಲದೇ ವ?ರ್ಕ್ಕೆ ೨೫೦ ದಶಲಕ್ಷ ಜನರು ನಾಯಿಗಳ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಯಾವುದೇ ನಾಯಿ ಕಡಿತವನ್ನು ಯಾರೂ ನಿರ್ಲಕ್ಷಿಸದೇ ನಾಯಿ ಕಡಿದ ತಕ್ಷಣ ಕನಿ?್ಠ ೧೦ ನಿಮಿ?ಗಳ ಕಾಲ ನೀರು ಹಾಗೂ ಸೋಪಿನಿಂದ ನಿರಂತರವಾಗಿ ಆ ಭಾಗವನ್ನು ತೊಳೆಯಬೇಕು. ಬಳಿಕ ಆಸ್ಪತ್ರೆಗೆ ತೆರಳಿ ರೇಬಿಸ್ ನಿರೋಧಕ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಸಾಕು ನಾಯಿಗಳಿಗೂ ತಪ್ಪದೇ ಕಾಲಕಾಲಕ್ಕೆ ಲಸಿಕೆಯನ್ನು ಹಾಕಿಸಬೇಕು ಎಂದು ತಿಳಿಸಿದರು.


ಪ್ರಾಂಶುಪಾಲ ವಿಜಯ್ ಮಾತನಾಡಿ, ಎಲ್ಲರೂ ರೇಬಿಸ್ ರೋಗದ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಿ ರೋಗ ಬರದಂತೆ ಮುಂಜಾಗ್ರತೆ ವಹಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.


ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷರವರು ರೇಬಿಸ್ ರೋಗದ ಬಗೆಗಿರುವ ಆತಂಕಗಳು, ರೇಬಿಸ್ ದಿನಾಚರಣೆಯ ಮಹತ್ವ, ರೇಬಿಸ್ ರೋಗನಿರೋಧಕ ಲಸಿಕೆಯ ವಿವರಗಳು, ಸಾಕು ಪ್ರಾಣಿಗಳಿಗೆ ಹಾಕಿಸಬೇಕಾದ ರೇಬಿಸ್ ರೋಗ ನಿರೋಧಕ ಲಸಿಕೆ ಬಗ್ಗೆ ತಿಳಿಸಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶ್ರೀನಿವಾಸ್‌ರವರು ಪ್ರಾತ್ಯಕ್ಷತೆ ಮೂಲಕ ರೇಬಿಸ್ ರೋಗದ ಲಕ್ಷಣಗಳು, ಹರಡುವ ಬಗ್ಗೆ, ರೋಗನಿರೋಧಕ ಲಸಿಕೆ, ತಡೆಗಟ್ಟುವಿಕೆ, ವಹಿಸಬೇಕಾದ ಮುಂಜಾಗತಾ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.


ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಾಥ್, ಉಪನ್ಯಾಸಕರು, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ದೇಚಮ್ಮ, ಕಾರ್ಯಕ್ರಮ ವ್ಯವಸ್ಥಾಪಕರಾದ ನಿಲೀಮ್, ರಘು ಹಾಗೂ ಇತರೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.