ಕಾನಹೊಸಹಳ್ಳಿ: ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಸಬಹುದು. ರಕ್ತದಾನದಿಂದ ದೇಹದಲ್ಲಿ ರಕ್ತದ ಕೊರತೆ ಉಂಟಾಗುತ್ತದೆ ಎಂಬ ತಪ್ಪು ಕಲ್ಪನೆ ಬಿಟ್ಟು ಯುವಕರು ರಕ್ತದಾನ ಮಾಡಬೇಕು ಎಂದು ಚಿಕ್ಕಜೋಗಿಹಳ್ಳಿ ವೈದ್ಯಾಧಿಕಾರಿ ಜೀವಿತ್ ಹೇಳಿದರು.
ಚಿಕ್ಕಜೋಗಿಹಳ್ಳಿ ಗ್ರಾಪಂ ಕಚೇರಿ ಅವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಈ ವರೆಗೂ ಕೃತಕ ರಕ್ತ ಸೃಷ್ಟಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಜೀವ ಉಳಿಸಲು ಮತ್ತೊಬ್ಬರ ರಕ್ತ ಅನಿವಾರ್ಯ. ಯುವಕರು ರಕ್ತದಾನ ಮಾಡಲು ಹಿಂಜರಿಯದೆ ರಕ್ತದಾನ ಮಾಡುವ ಮೂಲಕ ಸ್ಫೂರ್ತಿಯಾಗಬೇಕು ಎಂದರು.
40ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಗ್ರಾಪಂ ಅಧ್ಯಕ್ಷ ಎಂ.ಸಿ.ಅಶೋಕ ನಾಯ್ಕ, ಮಾಜಿ ಅಧ್ಯಕ್ಷ ಜೆ.ಎಂ.ರಾಜೇಶ ನಾಯ್ಕ, ಪಿಡಿಒ ಭರತ್ ಕುಮಾರ್, ಕಾರ್ಯದರ್ಶಿ ಯು.ಎಂ.ಪ್ರಕಾಶ್, ಐಸಿಟಿಸಿ ವಿಭಾಗದ ಸಿದ್ದೇಶ್ವರ, ತಿಪ್ಪೇಸ್ವಾಮಿ, ಶಿವಕುಮಾರ್, ಬಸವರಾಜ್ ಇತರರಿದ್ದರು.