ಗುರುಗುಂಟಾದ ಉಪ ಪೊಲೀಸ್ ಠಾಣೆಯಲ್ಲಿ ಸೋಮವಾರ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಹಟ್ಟಿಚಿನ್ನದಗಣಿ ಪಿಎಸ್‌ಐ ಧರ್ಮಣ್ಣ ಮಾತನಾಡಿದರು. ಪ್ರಮುಖರಾದ ವಿಶ್ವನಾಥ ಪಟ್ಟಣಶೆಟ್ಟಿ, ಸದರ್ ಸೈಯದ್ ಅಬೀಬುಲ್ಲಾ, ಬಾಬು ದಿಡ್ಡಿಮನಿ, ಹನುಮಂತ ಅಂಬಿಗೇರ್ ಇತರರಿದ್ದರು. 
ಜಿಲ್ಲೆ

ಅಹಿತಕರ ಘಟನೆಗಳಿಗೆ ಅವಕಾಶ ನೀಡದಿರಿ

ಗುರುಗುಂಟಾ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಭ್ರಾತೃತ್ವ ಭಾವನೆಯೊಂದಿಗೆ ಶಾಂತಿಯುತವಾಗಿ ಆಚರಿಸಬೇಕು ಎಂದು ಹಟ್ಟಿಚಿನ್ನದಗಣಿ ಠಾಣೆ ಪಿಎಸ್‌ಐ ಧರ್ಮಣ್ಣ ಹೇಳಿದರು.

ಬಕ್ರೀದ್ ನಿಮಿತ್ತ ಇಲ್ಲಿನ ಉಪ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಹಬ್ಬ ಆಚರಿಸಬೇಕು. ಒಂದು ವೇಳೆ ಕ್ಷುಲ್ಲಕ ಕಾರಣಗಳ ನೆಪವೊಡ್ಡಿ ಕಾನೂನು ಸುವ್ಯವಸ್ಥೆ, ಶಾಂತಿ ಕದಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಎಎಸ್‌ಐ ಶೇಕ್ ರೆಹಮಾನ್, ರಮೇಶ, ಮುಖ್ಯ ಪೇದೆ ಪ್ರಭುಗೌಡ ಪಾಟೀಲ್, ದಳಪತಿ ವಿಶ್ವನಾಥ ಪಟ್ಟಣಶೆಟ್ಟಿ, ಜಾಮೀಯಾ ಮಸೀದಿ ಕಮಿಟಿ ಅಧ್ಯಕ್ಷ ಸದರ್ ಸೈಯದ್ ಅಬೀಬುಲ್ಲಾ, ಗ್ರಾಪಂ ಸದಸ್ಯ ಬಾಬು ದಿಡ್ಡಿಮನಿ, ವಿಶ್ವ ಹಿಂದು ಪರಿಷತ್ ಕಾರ್ಯಕರ್ತ ಹನುಮಂತ ಅಂಬಿಗೇರ್, ಎಸ್‌ಡಿಪಿಐನ ಬಬ್ಲೂ, ಮೋಬಿನ್, ಯಲ್ಲಪ್ಪ, ಬಾಷಾಸಾಬ್ ಸಂತ್ರಾಸ್, ನಾಗರಾಜ ಭೋವಿ, ಲಾಲ್ ಸಾಬ್, ಧನರಾಜ್ ಇತರರಿದ್ದರು.