ಭದ್ರಾವತಿ: ಶ್ರದ್ಧಾ ಭಕ್ತಿ, ಶಾಂತಿಯಿAದ ಹಬ್ಬಗಳನ್ನು ಆಚರಿಸಬೇಕೇ ಹೊರತು ಯಾವುದೇ ಕೋಮು ಸಂಘರ್ಷಗಳಿಗೆ ದಾರಿ ಮಾಡಿಕೊಡಬಾರದು ಎಂದು ಜಿಲ್ಲಾ ರಕ್ಷಣಾಽಕಾರಿ ಜಿ.ಕೆ.ಮಿಥುನ್ ಕುಮಾರ್ ಹೇಳಿದರು.
ಸೋಮವಾರ ಸಂಜೆ ನ್ಯೂಟೌನ್ ರೋಟರಿ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ಏರ್ಪಡಿಸಿದ್ದ ಗೌರಿ ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬಗಳ ಶಾಂತಿ ಸಭೆಯಲ್ಲಿ ವಿವಿಧ ಸಮಾಜದ ಸಂಘ ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ಹಬ್ಬಗಳನ್ನು ಕಾನೂನು ಚೌಕಟ್ಟಿನೊಳಗೇ ಆಚರಿಸಬೇಕು. ಸಾರ್ವಜನಿಕ ಹಿತಾಸಕ್ತಿ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸನ್ನದ್ದವಾಗಿರುತ್ತದೆ ಎಂದರು.
ಗಣೇಶ ಹಬ್ಬದಲ್ಲಿ ಪ್ರತಿಷ್ಟಾಪನೆ ಪೂರ್ವ ಹಾಗೂ ವಿಸರ್ಜನೆ ಸೇರಿ ಯಾವುದೇ ಮೆರವಣೆಗೆಯಲ್ಲಿ ಆಕ್ರೋಶ, ಆವೇಶದಿಂದ ವರ್ತಿಸದೆ ಶಾಂತಿಯಿAದ ಎಲ್ಲರೂ ವರ್ತಿಸಬೇಕು. ಕಿಡಿಗೇಡಿಗಳು ಯಾವುದೇ ತೊಂದರೆ ನೀಡಿದ್ದಲ್ಲಿ ಅವರ ವಿರುದ್ಧ ಇಲಾಖೆ ಕಠಿಣ ಕ್ರಮ ಜರುಗಿಸುತ್ತದೆ. ಸಾರ್ವಜನಿಕರು ಅನುಮತಿ ಪಡೆಯಲು ನಗರಸಭೆಯಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆ ತೆರೆಯಲಾಗಿದೆ ಎಂದರು.
ಈಗಾಗಲೆ ಪೊಲೀಸ್ ಇಲಾಖೆ ಏರಿಯಾ ಡಾಮಿನೇಷನ್ ವಿಶೇಷ ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ಉಪಟಳ ನೀಡುವ ವ್ಯಕ್ತಿಗಳನ್ನು ಠಾಣೆಗೆ ಕರೆತಂದು ಅವರನ್ನು ಗಾಂಜಾ ಸೇವನೆ ಪರೀಕ್ಷೆಗೆ ಒಳಪಡಿಸಲಾಗಿದೆ. ಗಾಂಜಾ ಸೇವನೆ ದೃಢವಾದಲ್ಲಿ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು. ಯಾವುದೇ ಅವಘಡಗಳಿಗೆ ಅವಕಾಶ ಕೊಡದೆ ವಿಜೃಂಭಣೆಯಿAದ ಹಬ್ಬ ಆಚರಿಸಿ ಎಂದು ಸಲಹೆ ನೀಡಿದರು.
ಡಿವೈಎಸ್‌ಪಿ ನಾಗರಾಜ್, ನಗರ ವೃತ್ತ ನಿರೀಕ್ಷಕ ಶೈಲಕುಮಾರ್, ಗುರುರಾಜ್, ಮೈಲಾರ್, ಲಕ್ಷಿ÷್ಮÃಪತಿ, ಪೌರಾಯುಕ್ತ ಮನುಕುಮಾರ್, ನಗರಸಭೆ ಅಧ್ಯಕ್ಷೆ ಶ್ರುತಿ ವಸಂತಕುಮಾರ್ ಇತರರಿದ್ದರು.