ಜಿಲ್ಲೆ

ವರುಣ ಕೃಪೆಗೆ ಕತ್ತೆ ಪೂಜೆಗೆ ಮೊರೆ

Davangere - Desk - Mahesh Babu E

ಪರಶುರಾಮಪುರ: ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ಮಳೆ ಕೈಕೊಟ್ಟಿದ್ದು, ರೈತರು, ಜನರು, ಜಾನುವಾರುಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ಇದರಿಂದ ಪಾರು ಮಾಡುವಂತೆ ಹಾಗೂ ವರುಣನ ಕೃಪೆಗಾಗಿ ಹುಲಿಕುಂಟೆ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಸೋಮವಾರ ಕತ್ತೆಗಳಿಗೆ ಜನರು ಮೊರೆ ಹೋಗಿದ್ದರು.

ಕತ್ತೆಗಳನ್ನು ಸಿಂಗರಿಸಿ, ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿ, ವರುಣ ದೈವ ಕೃಪೆ ತೋರು ಎಂದು ಪ್ರಾರ್ಥನೆ ಸಲ್ಲಿಸಿದರು.

ಪೂಜಾರಿಗಳಾದ ಮುತ್ತೇಶ, ರಾಜು, ಜಗಣ್ಣ, ಲಿಂಗರಾಜು, ಕೃಷ್ಣಮೂರ್ತಿ, ಪ್ರಕಾಶ, ವಸಂತ್, ಚಿತ್ತಪ್ಪ, ಕದುರಮ್ಮ, ಮಂಗಳಗೌರಿ, ಅರುಣ್, ತಿಪ್ಪೇಸ್ವಾಮಿ ಇದ್ದರು.