ಜಿಲ್ಲೆ

ಶ್ರೀ ಮಾರುತೇಶ್ವರ ದೇವಸ್ಥಾನಕ್ಕೆ ದೇಣಿಗೆ

ಸೋಮನಾಥ ರೆಡ್ಡಿ

ಹೊಳೆಆಲೂರ: ಮಹಿಳೆಯರ ಆರ್ಥಿಕ ಅಭಿವೃದ್ಧಿ ಜತೆಗೆ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಹಕಾರಿಯಾಗಿದೆ ಎಂದು ಎಚ್.ಬಿ. ಅಸೂಟಿ ಹೇಳಿದರು.

ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಇತ್ತೀಚಿಗೆ ಮೆಣಸಗಿ ಗ್ರಾಮದ ಮಾರುತೇಶ್ವರ ದೇವಸ್ಥಾನದ ಜೀರ್ಣೋದ್ದಾರಕ್ಕೆ ಮಾರುತೇಶ್ವರ ಸಮಿತಿಗೆ 1 ಲಕ್ಷ ರೂ. ಸಹಾಯಧನ ವಿತರಿಸಿ ಅವರು ಮಾತನಾಡಿದರು. ‘ಧರ್ಮಸ್ಥಳ ಯೋಜನೆಯಿಂದ ಹತ್ತಾರು ಜನಮುಖಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.

ನರಗುಂದ ಕ್ಷೇತ್ರ ಯೋಜನಾಧಿಕಾರಿ ಜಗದೀಶ ಬಂಡಾರಿ ಮಾತನಾಡಿದರು. ಮುದಿಯಪ್ಪಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಲಯ ಮೇಲ್ವಿಚಾರಕ ಗುರುರಾಜ ಬೆಳಗಲಿ, ಮಲ್ಲಪ್ಪ ತುಪ್ಪದ, ಹನಮಂತಪ್ಪ ಯರಗೊಪ್ಪ, ನಿಂಗಬಸಪ್ಪ ಮುದೇನೂರು, ಸೇವಾ ಪ್ರತಿನಿಧಿ ಸವಿತಾ ಹಾಗೂ ರುಕ್ಮಿಣಿ ಇತರರಿದ್ದರು.