ಹುಬ್ಬಳ್ಳಿ: ಇಲ್ಲಿಯ ಸದ್ಗುರು ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಬರುವ ಅಂಗವಿಕಲ ಹಾಗೂ ವಯೋವೃದ್ಧ ಭಕ್ತರ ಅನುಕೂಲಕ್ಕಾಗಿ ವ್ಹೀಲ್ ಚೇರ್ ನ್ನು ಇನ್ನರ್ ವಿಲ್ ಕ್ಲಬ್ ಆಫ್ ಮಿಡ್ ಟೌನ್ ವತಿಯಿಂದ ಗುರುವಾರ ದೇಣಿಗೆ ನೀಡಲಾಯಿತು.
ಕ್ಲಬ್ ಅಧ್ಯಕ್ಷೆ ಶಿಲ್ಪಾ ಶೆಟ್ಟಿ, ಶೈಲಜಾ ಬಗಾಡೆ, ರಂಜನಾ ಕರೀಟ್, ಗಿರಿಜಾ ನೂಲ್ವಿ ಇವರು ದೇಣಿಗೆ ಸಲ್ಲಿಸಿದರು. ಧರ್ಮದರ್ಶಿ ಡಾ. ಗೋವಿಂದ ಮಣ್ಣೂರ, ಮ್ಯಾನೇಜರ್ ಈರಣ್ಣ ತುಪ್ಪದ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.