ವಿಜಯಪುರ:ನಗರದ ಶತಮಾನ ಕಂಡ ಶ್ರೀ ಸಿದ್ಧೇಶ್ವರ ಸಂಸ್ಥೆ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂ ನಿಯಮಿತದ ವತಿಯಿಂದ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ದಾಸೋಹಕ್ಕಾಗಿ 101 ಕ್ವಿಂಟಲ್ ಅಕ್ಕಿ ಹಾಗೂ 5001 ವಿಭೂತಿಗಳನ್ನು ಬುಧವಾರ ನೀಡಲಾಯಿತು.
ಸಿದ್ಧೇಶ್ವರ ಸಂಸ್ಥೆ, ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂದ ಅಧ್ಯರೂ ಆದ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಸಂಸ್ಥೆ ಪದಾಧಿಕಾರಿಗಳು ಶ್ರೀಮಠಕ್ಕೆ ಭೇಟಿ ನೀಡಿ, ಅಭಿನವ ಗವಿಸಿದ್ದೇಶ್ವರ ಶ್ರೀಗಳ ಆಶಿರ್ವಾದ ಪಡೆದರು.
ನಂತರ ಶ್ರೀಮಠಕ್ಕೆ 101 ಕ್ವಿಂಟಲ್ ಅಕ್ಕಿ ಹಾಗೂ ಸಿದ್ಧೇಶ್ವರ ಸಂಸ್ಥೆಯ ರಾಮನಗೌಡ ಪಾಟೀಲ ಯತ್ನಾಳ ಗೋರಾ ಕೇಂದ್ರದಲ್ಲಿ ಸಿದ್ಧಪಡಿಸಿದ 5001 ವಿಭೂತಿ, 5 ಕೆಜಿ ಕುಂಕುಮ ಹಾಗೂ 5 ಕೆಜಿ ತುಪ್ಪ ಹಸ್ತಾಂತರಿಸಿದರು.
ಸಂಸ್ಥೆ ಚೇರ್ಮನ್ ಬಸಯ್ಯ ಹಿರೇಮಠ, ಉಪಾಧ್ಯ ಸಂ.ಗು. ಸಜ್ಜನ, ನಿರ್ದೇಶಕರಾದ ಬಸವರಾಜ ಸೂಗೂರ, ಸದಾಶಿವ ಗುಡ್ಡೋಡಗಿ, ಎನ್.ಎಂ. ಗೊಲಾಯಿ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಮಲಕಪ್ಪ ಗಾಣಿಗೇರ, ಸಾಯಿಬಣ್ಣ ಭೋವಿ, ಸಿದ್ಧಸಿರಿ ಸೌಹಾರ್ದ ಸಹಕಾರಿಯ ನಿರ್ದೇಶಕ ಪ್ರಭುಗೌಡ ದೇಸಾಯಿ, ಕನಕಗೌಡರ ಮತ್ತಿತರರಿದ್ದರು.
ವಿಜಯಪುರದ ಸಿದ್ಧೇಶ್ವರ ಸಂಸ್ಥೆ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂ ನಿಯಮಿತದಿಂದ ಕೊಪ್ಪಳದ ಗವಿಸಿದ್ಧೇಶ್ವರ ಮಠಕ್ಕೆ ಅಕ್ಕಿ ಹಾಗೂ ವಿಭೂತಿಗಳನ್ನು ಹಸ್ತಾಂತರಿಸಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬಸಯ್ಯ ಹಿರೇಮಠ, ಉಪಾಧ್ಯ ಸಂ.ಗು. ಸಜ್ಜನ ಮತ್ತಿತರರಿದ್ದಾರೆ.