ಲಿಂಗಸುಗೂರು ಎಸಿ ಬಸವಣೆಪ್ಪ ಕಲಶೆಟ್ಟಿಗೆ ನಮ್ಮ ಕರ್ನಾಟಕ ಸೇನೆ ಸಂಘಟನೆ ಮುಖಂಡರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಶಿವರಾಜ ನಾಯಕ, ಪ್ರಧಾನ ಕಾರ್ಯದರ್ಶಿ ನಿರುಪಾದಿ ಹಿರೇಮಠ, ಉಪಾಧ್ಯಕ್ಷ ಚಂದ್ರು ನಾಯಕ, ಶಿವರಾಜ ಅಲಬನೂರು ಇತರರಿದ್ದರು. 
ಜಿಲ್ಲೆ

ದಾಸೋಹ ದೇಣಿಗೆ ವೈಯಕ್ತಿಕ ಖಾತೆಗೆ ಜಮೆ

ಲಿಂಗಸುಗೂರು: ತಾಲೂಕಿನ ಗುರುಗುಂಟಾ ಅಮರೇಶ್ವರ ಸುಕ್ಷೇತ್ರದಲ್ಲಿ ನಡೆಯುತ್ತಿರುವ ಅವ್ಯವಹಾರ ತಡೆಯುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ಸಂಘಟನೆ ಮುಖಂಡರು ಎಸಿ ಬಸವಣೆಪ್ಪ ಕಲಶೆಟ್ಟಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಸುಕ್ಷೇತ್ರದಲ್ಲಿ ಬೇರೆ ತಾಲೂಕಿನವರು ಅನಧಿಕೃತವಾಗಿ ದಾಸೋಹ ನಡೆಸುತ್ತಿದ್ದು, ಬರುವ ದೇಣಿಗೆಯನ್ನು ವೈಯಕ್ತಿಕ ಖಾತೆಗೆ ಜಮೆ ಮಾಡಿಕೊಳ್ಳುತ್ತಿದ್ದಾರೆ. ಭಕ್ತರು ನೀಡುವ ದವಸ ಧಾನ್ಯಗಳ ಲೆಕ್ಕಪತ್ರವಿಲ್ಲವಾಗಿದೆ. ದೇವಸ್ಥಾನ ವ್ಯಾಪ್ತಿಯ 21 ಮಳಿಗೆಗಳನ್ನು ಪ್ರತಿ ಮೂರು ವರ್ಷಕ್ಕೆ ಹರಾಜು ಪ್ರಕ್ರಿಯೆ ನಡೆಸಬೇಕೆಂಬ ನಿಯಮವಿದೆ. ಆದರೆ 2007 ಬಳಿಕ ಈವರೆಗೆ ನಡೆದಿಲ್ಲ ಎಂದು ದೂರಿದರು.

ಅಮರೇಶ್ವರ ಕ್ರಾಸ್‌ನಿಂದ ಅಮರೇಶ್ವರ ದೇವಸ್ಥಾನವರೆಗೆ ಅಪೂರ್ಣಗೊಂಡ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದ್ದು, ಗುತ್ತಿಗೆ ರದ್ದುಗೊಳಿಸಿ ಪುನಃ ಕಾಮಗಾರಿ ಆರಂಭಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕು. ದೇವಸ್ಥಾನ ಸಮಿತಿ ರಚಿಸಬೇಕು. ಗುರುಗುಂಟಾ, ಲಿಂಗಸುಗೂರು, ದೇವದುರ್ಗ, ಸಿಂಧನೂರು ಸಾರಿಗೆ ಘಟಕಗಳ ಬಸ್‌ಗಳನ್ನು ಸುಕ್ಷೇತ್ರಕ್ಕೆ ಬಂದು ಹೋಗುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.

ಸಂಘಟನೆ ತಾಲೂಕು ಅಧ್ಯಕ್ಷ ಶಿವರಾಜ ನಾಯಕ, ಪ್ರಧಾನ ಕಾರ್ಯದರ್ಶಿ ನಿರುಪಾದಿ ಹಿರೇಮಠ, ಉಪಾಧ್ಯಕ್ಷ ಚಂದ್ರು ನಾಯಕ, ಶಿವರಾಜ ಅಲಬನೂರು, ಶಂಕರ ಚವ್ಹಾಣ, ರುದ್ರಯ್ಯಸ್ವಾಮಿ, ರಮೇಶ ಭೋವಿ, ಮಹಾಂತಯ್ಯಸ್ವಾಮಿ, ರಾಜು ಪತ್ತಾರ, ಶಿವಲಿಂಗ, ಬಸವಲಿಂಗ, ರಾಘವೇಂದ್ರ, ವೆಂಕಟೇಶ, ಕೃಷ್ಣಾ ಭೋವಿ, ಲಕ್ಷ್ಮಣ ಭೋವಿ, ರಾಜು ನಾಯಕ, ವಿವೇಕಾನಂದ ನಾಯಕ, ಮಹೇಂದ್ರ, ರಮೇಶ, ತಿಮ್ಮಣ್ಣ, ಪರಶುರಾಮ, ವೀರೇಶ ಇತರರಿದ್ದರು.