ಜಿಲ್ಲೆ

ಬಾಲಕಿಯರ ಪ್ರೌಢಶಾಲೆಗೆ ಧ್ವನಿವರ್ಧಕ ಕೊಡುಗೆ

ಕೋಟ: ನಿರಂತರ ಅಭ್ಯಾಸದಿಂದ ಯಶಸ್ಸು ಪಡೆಯಬಹುದು. ವಿದ್ಯಾರ್ಥಿಗಳಾದ ತಾವು ಶಿಸ್ತು, ದೇಶಪ್ರೇಮ ಅಳವಡಿಸಿಕೊಳ್ಳುವುದು ತೀರಾ ಅಗತ್ಯ. ಜತೆಗೆ ನಾಗರಿಕ ಪ್ರಜ್ಞೆ ಮತ್ತು ನಾಗರಿಕ ಶಿಷ್ಟಾಚಾರ ಅರಿಯಲು ‘ಶಾಲಾ ನೆರವಿ’ ಉತ್ತೇಜಕ ಎಂದು ವಿಶ್ರಾಂತ ಉಪನ್ಯಾಸಕ ಮಂಜುನಾಥ ಉಪಾಧ್ಯ ನುಡಿದರು.

ವಿವೇಕ ಬಾಲಕಿಯರ ಪ್ರೌಢಶಾಲೆಯ ಶಾಲಾ ನೆರವಿ ಕಾರ್ಯಕ್ರಮದಲ್ಲಿ ಪೋರ್ಟೆಬಲ್ ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಿ ವಾತನಾಡಿದರು.

ಮುಖ್ಯ ಶಿಕ್ಷಕ ವೆಂಕಟೇಶ ಉಡುಪ ಸ್ವಾಗತಿಸಿ, ಶಿಕ್ಷಕ ನರೇಂದ್ರ ಕುವಾರ್ ವಂದಿಸಿದರು. ಶಾಲಾ ನಾಯಕಿ ಇಂಪನಾ ನಿರೂಪಿಸಿದರು.