ಬೆಳ್ತಂಗಡಿ: ಮಾನಸಿಕ ಕುಂಠಿತ ಮತ್ತು ದೈಹಿಕ ಸಂಬಂಧಿತ ವೈಕಲ್ಯ ಹೊಂದಿರುವ ಮಕ್ಕಳು ಮತ್ತು ಯುವಕರಿಗೆ ವಿಶೇಷ ಶಿಕ್ಷಣ ನೀಡುವ ದಯಾ ವಿಶೇಷ ಚೇತನ ಶಾಲೆಗೆ ಆರ್.ಪಿ.ಸಿ ವತಿಯಿಂದ ಕಲಿಕಾ ಸಾಮಗ್ರಿ ಮತ್ತು ಆಟೋಪಕರಣ ಹಸ್ತಾಂತರ ಇತ್ತೀಚೆಗೆ ವಿತರಿಸಲಾಯಿತು.
ವಿದ್ಯಾರ್ಥಿಗಳು ತಯಾರಿಸಿದ ಹ್ಯಾಂಡ್‌ಮೇಡ್ ವಸ್ತುಗಳನ್ನು ಆರ್.ಪಿ.ಸಿ ಸಂಸ್ಥೆಯ ಸದಸ್ಯರು ಖರೀದಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು. ಶಾಲೆ ಆಡಳಿತ ಮಂಡಳಿ ನಿರ್ದೇಶಕ ವಿನೋದ್ ಮಸ್ಕರೇನ್ಹಸ್, ಮುಖ್ಯಶಿಕ್ಷಕಿ ದಿವ್ಯಾ ಟಿ.ವಿ ಹಾಗೂ ಶಿಕ್ಷಕರು, ಆರ್‌ಪಿಸಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.