ಜಿಲ್ಲೆ

ಬೆಣ್ಣೆ ಕಾಲೇಜಿಗೆ ಪೀಠೋಪಕರಣ ಕೊಡುಗೆ

ಕುಮಟಾ: ಪಟ್ಟಣದ ಹೆಸರಾಂತ ಉದ್ಯಮಿ ಬೆಣ್ಣೆ ಕುಟುಂಬದವರ ನೇತೃತ್ವದಲ್ಲಿ ಇಲ್ಲಿನ ನೆಲ್ಲಿಕೇರಿ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜಿಗೆ ಅಳತೆ ಉಪಕರಣಗಳು ಮತ್ತು ಅಗತ್ಯ ಪೀಠೋಪಕರಣಗಳನ್ನು ಗುರುವಾರ ಉಚಿತ ಕೊಡುಗೆಯಾಗಿ ನೀಡಲಾಯಿತು.

ಹನುಮಂತ ಬೆಣ್ಣೆ ಗ್ರುಪ್ ಉದ್ಯಮದ ಸಂಸ್ಥಾಪಕ ಹನುಮಂತ ಬೆಣ್ಣೆಯವರ ಸಂಸ್ಥಾಪನಾ ದಿನದ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಪರವಾಗಿ ಪ್ರಭಾರಿ ಪ್ರಾಚಾರ್ಯ ಆರ್.ಎಚ್. ನಾಯ್ಕ ಸಲಕರಣೆಗಳನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ಪೊ›. ಆನಂದು ನಾಯ್ಕ, ನಿತ್ಯಾನಂದ ನಾಯ್ಕ ಇತರರಿದ್ದರು.

ಬೆಣ್ಣೆ ಗ್ರುಪ್ ವತಿಯಿಂದ ವಿನಾಯಕ ಹನುಮಂತ ನಾಯಕ ಬೆಣ್ಣೆ, ವಿದ್ಯಾ ವಿನಾಯಕ ನಾಯಕ ಬೆಣ್ಣೆ, ಪ್ರಸನ್ನ ವಾಸುದೇವ ನಾಯಕ ಬೆಣ್ಣೆ, ಅಶೋಕ ಸವೋತ್ತಮ ಶಾನಭಾಗ ಬಾಳೇರಿ, ಸುಮಂಗಲಾ ಅಶೋಕ ಶಾನಭಾಗ ಬಾಳೇರಿ, ಸುರೇಖಾ ಅಚ್ಯುತ ಬಾಳಗಿ, ಸಂಧ್ಯಾ ರಾಮಕೃಷ್ಣ ಶಾನಭಾಗ ಗೋಳಿ ಇತರರಿದ್ದರು.