ಜಿಲ್ಲೆ

ಶಾಲೆಗೆ ಉಚಿತ ಪೀಠೋಪಕರಣ ಕೊಡುಗೆ

ಸರಗೂರು: ತಾಲೂಕಿನ ಹಾದನೂರು ಗ್ರಾಪಂ ವ್ಯಾಪ್ತಿಯ ಹಾದನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮೀಣ ಕೂಟ ಮೈಕ್ರೋ ಫೈನಾನ್ಸ್ ವತಿಯಿಂದ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಉಚಿತವಾಗಿ ಪೀಠೋಪಕರಣಗಳನ್ನು ಬುಧವಾರ ವಿತರಿಸಲಾಯಿತು.


ಸಂಸ್ಥೆಯ ಏರಿಯಾ ಮ್ಯಾನೇಜರ್ ನಂದೀಶ್ ಮಾತನಾಡಿ, ಗುಣಮಟ್ಟದ ಶಿಕ್ಷಣ ದೊರಕಿಸಲು ಸಮಾಜದ ಪ್ರೋತ್ಸಾಹವೂ ಅಗತ್ಯ. ಈ ನಿಟ್ಟಿನಲ್ಲಿ ಸಂಸ್ಥೆಯ ಮುಖ್ಯಸ್ಥರ ಆದೇಶದ ಮೇರೆಗೆ ಗ್ರಾಮೀಣ ಭಾಗದ ಕಾಡಂಚಿನ ಭಾಗದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಗುರುತಿಸಿ ಆ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ನಮ್ಮ ಸಂಸ್ಥೆಯಿಂದ ಇಂತಹ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದರು.


ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಡಿ ಶಾಲೆಗೆ ಮೈಕ್ರೋ ಫೈನಾನ್ಸ್‌ನಿಂದ ಉಚಿತ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿರುವುದಕ್ಕೆ ಮುಖ್ಯಶಿಕ್ಷಕಿ ಶಾಂತಮ್ಮ ಧನ್ಯವಾದ ಹೇಳಿದರು.


ಬ್ರಾೃಂಚ್ ಮ್ಯಾನೇಜರ್ ಶಶಿಕುಮಾರ್, ಗ್ರಾಮದ ಯಜಮಾನರಾದ ಮಹದೇವಸ್ವಾಮಿ, ರಾಜಯ್ಯ, ಗ್ರಾಪಂ ಉಪಾಧ್ಯಕ್ಷ ಪ್ರಕಾಶ್, ಸದಸ್ಯರಾದ ರತ್ನಮ್ಮ ರಾಜೇಶ್, ಶಿವರಾಜು, ಭಾಗ್ಯಾ ಕೆಂಪಸಿದ್ದ, ಎಸ್‌ಡಿಎಂಸಿ ಸಮಿತಿ ಅಧ್ಯಕ್ಷ ಮಹೇಂದ್ರ, ಉಪಾಧ್ಯಕ್ಷೆ ಹೊಂಬಾಳಮ್ಮ, ಸದಸ್ಯರಾದ ಶಿವು, ಪಾಪಣ್ಣ, ಆಶಾ, ರಾಮಕೃಷ್ಣ, ರೇಣುಕಾ, ರೂಪಾ, ಅತಿಥಿ ಶಿಕ್ಷಕರಾದ ಪ್ರಸನ್ನ, ಕೃಷ್ಣಮೂರ್ತಿ, ಸಿದ್ದರಾಜು , ಗ್ರಾಮದ ಮುಖಂಡರು, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.