ಅರಕಲಗೂಡು ಪಪಂ ವತಿಯಿಂದ ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರಿನ ಸಾಧನಗಳನ್ನು ವಿತರಿಸಲಾಯಿತು. ಪ್ರದೀಪ್ ಕುಮಾರ್, ಕೃಷ್ಣಯ್ಯ, ಅಬ್ದುಲ್ ಬಾಸಿದ್, ಹೂವಣ್ಣ ಇತರರಿದ್ದರು. 
ಜಿಲ್ಲೆ

1.30 ಲಕ್ಷ ರೂ. ವೆಚ್ಚದ ಉಪಕರಣಗಳ ಕೊಡುಗೆ

 ಅರಕಲಗೂಡು: ಪಟ್ಟಣದ 6 ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರಿನ ಸಾಧನಗಳನ್ನು ಪಟ್ಟಣ ಪಂಚಾಯಿತಿ ವತಿಯಿಂದ ಇತ್ತೀಚೆಗೆ ಕೊಡುಗೆಯಾಗಿ ನೀಡಲಾಯಿತು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಪ್ರದೀಪ್ ಕುಮಾರ್ ಮಾತನಾಡಿ, 2022-23ನೇ ಎಸ್.ಎಫ್.ಸಿ. ಶೇ. 7.25ರ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಸಾಧನಗಳನ್ನು ವಿತರಿಸಲಾಗಿದೆ. ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿಗಳಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸಿಕೊಂಡುವಂತೆ ಮನವಿ ಸಲ್ಲಿಸಿದರು. ಮಕ್ಕಳಿಗೆ ಶುದ್ಧ ಆಹಾರದ ಜತೆಗೆ ಶುದ್ಧ ನೀರು ಅತ್ಯಗತ್ಯವಾಗಿರುವುದನ್ನು ಗಮನಿಸಿ ಒಂದು ಲಕ್ಷದ ಮೂವತ್ತು ಸಾವಿರ ರೂ. ವೆಚ್ಚದಲ್ಲಿ ಶುದ್ಧ ನೀರಿನ ಸಾಧನವನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ತಿಳಿಸಿದರು.

ಸದಸ್ಯ ಹೂವಣ್ಣ ಮಾತನಾಡಿ, ಅಂಗನವಾಡಿಗಳಿಗೆ ಅಗತ್ಯವಾದ ಇನ್ನೂ ಬೇಕಿರುವ ಪರಿಕರಗಳನ್ನು ಇನ್ನೆರಡು ತಿಂಗಳಲ್ಲಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಪಂ ಮಾಜಿ ಅಧ್ಯಕ್ಷರಾದ ಅಬ್ದುಲ್ ಬಾಸಿದ್, ಕೃಷ್ಣಯ್ಯ, ಸದಸ್ಯೆ ಸುಮಿತ್ರಮ್ಮ, ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್ ಇತರರು ಇದ್ದರು.