ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರ ಜನ್ಮ ದಿನ ನಿಮಿತ್ತ ತಡವಲಗಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾಂಗ್ರೆಸ್ ಮುಖಂಡ ಚಂದ್ರಶೇಖರ ರೂಗಿ ಆ್ಯಂಬುಲೆನ್ಸ್ ಹಸ್ತಾಂತರಿಸಿದರು. ಡಾ. ಈರಣ್ಣ ಧಾರವಾಡಕರ, ಅಶೋಕ ಮಿರ್ಜಿ, ರವಿ ಹೊಸಮನಿ, ಶಿವಶಂಕರ ಹಿಳ್ಳಿ ಇತರರಿದ್ದರು 
ಜಿಲ್ಲೆ

ತಡವಲಗಾ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ಕೊಡುಗೆ

ಇಂಡಿ: ಕ್ಷೇತ್ರದ ಬಡಜನರ ಏಳಿಗಾಗಿ ದುಡಿಯುತ್ತಿರುವ ಶಾಸಕ ಯಶವಂತ್ರಾಯಗೌಡ ಪಾಟೀಲ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶೃಮಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಚಂದ್ರಶೇಖರ ರೂಗಿ ಹೇಳಿದರು.
ಸೋಮವಾರ ಶಾಸಕ ಯಶವಂತ್ರಾಯಗೌಡ ಪಾಟೀಲ ಅವರ ಜನ್ಮ ದಿನದ ನಿಮಿತ್ತ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ತಡವಲಗಾ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕರ ಅನುದಾನದಲ್ಲಿ 12 ಲಕ್ಷ ರೂ. ಮೌಲ್ಯದ ಆ್ಯಂಬುಲೆನ್ಸ್ ಹಸ್ತಾಂತರಿಸಿ ಅವರು ಮಾತನಾಡಿದರು.
ಶಾಸಕರು ಸರ್ವ ಸಮುದಾಯದ ಏಳುಗೆ ಮಾಡುತ್ತಿದ್ದಾರೆ. ಎಲ್ಲ ಸಮುದಾಯಕ್ಕೂ ರಾಜಕೀಯ ಸ್ಥಾನಮಾನ ನೀಡಿದ್ದಾರೆ. ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದರು.
ಡಾ.ಈರಣ್ಣ ಧಾರವಾಡಕರ, ಅಶೋಕ ಮಿರ್ಜಿ, ರವಿ ಹೊಸಮನಿ, ಶಿವಶಂಕರ ಹಿಳ್ಳಿ, ರಾಹುಲ್ ಮಸಳಿ, ರಾಜು ದಡೇದ, ಮಲ್ಲು ಇಂಡಿ, ರಾಜು ಪತಂಗೆ, ಮಜ್ಜು ಮುಲ್ಲಾ ಇತರರಿದ್ದರು.