ಜಿಲ್ಲೆ

ಶಾಲೆಗಳ ಅಭಿವೃದ್ಧಿಗೆ ಬೇಕು ದೇಣಿಗೆ

Davangere - Desk - Mahesh Babu E

ಪರಶುರಾಮಪುರ: ಚಳ್ಳಕೆರೆ ತಾಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಶಾಸಕ ಟಿ.ರಘುಮೂರ್ತಿ ಹೆಚ್ಚು ಆದ್ಯತೆ ನೀಡುತ್ತಿದ್ದು, ಇದರ ಜತೆಗೆ ಶ್ರೀಮಂತರು, ಉಳ್ಳುವರು, ದಾನಿಗಳು ಸರ್ಕಾರಿ ಶಾಲೆ ಅಭಿವೃದ್ಧಿಗೆ ದೇಣಿಗೆ ನೀಡಲು ಮುಂದಾಗಬೇಕು ಎಂದು ಗ್ರಾಪಂ ಅಧ್ಯಕ್ಷೆ ಕವಿತಾ ಹೇಳಿದರು.

ಶಾಸಕರ 5 ಲಕ್ಷ ರೂ. ಅನುದಾನದಲ್ಲಿ ಪಿ.ಮಹದೇವಪುರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸಿದ್ದ ಅಕ್ಷರ ದಾಸೋಹ ಭವನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಪಂ ಉಪಾಧ್ಯಕ್ಷ ಓಬಳೇಶ ಮಾತನಾಡಿ, ಆಂಧ್ರಗಡಿ ಭಾಗದ ಹಳ್ಳಿಗಳಲ್ಲಿ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಮತ್ತು ಸ್ಥಳೀಯ ಶಾಸಕರು ವಿಶೇಷ ಆದ್ಯತೆ ನೀಡುತ್ತಿದ್ದು, ಜನರ ಸಹಕಾರವೂ ಅಗತ್ಯ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ತ್ಯಾಗರಾಜು, ಸದಸ್ಯರಾದ ವೀರೇಶ, ಶಶಿಕಲಾ, ರತ್ನಮ್ಮ, ಕೆಂಚಮ್ಮ, ನಿಂಗಣ್ಣ, ಶಾಲಾ ಸಮಿತಿ ಅಧ್ಯಕ್ಷ ಲಕ್ಷ್ಮಣಪ್ಪ, ಉಪಾಧ್ಯಕ್ಷ ಇಮಾಮ್ ಅಲಿ, ವೀರಣ್ಣ, ಮುಖ್ಯಶಿಕ್ಷಕ ವಿ.ರಾಮಾಂಜಿನೇಯ, ಶಿಕ್ಷಕರಾದ ಎ.ವೀರಣ್ಣ, ದೀನನಾಥ, ಯಾಸ್ಮಿನ್, ಶಶಿಕಲಾ ಇದ್ದರು.