ಜಿಲ್ಲೆ

ಪಕ್ಷಾತೀತ, ಜಾತ್ಯತೀತವಾಗಿ ಜೀರ್ಣೋದ್ಧಾರ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಪಕ್ಷಾತೀತ ಮತ್ತು ಜಾತ್ಯತೀತವಾಗಿ ಕಾಪು ಹೊಸ ಮಾರಿಗುಡಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ನಡೆದುಕೊಂಡು ಬಂದಿವೆ. ಬ್ರಹ್ಮಕಲಶೋತ್ಸವ ಸಂದರ್ಭ ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಅದಕ್ಕೆ ಪೂರಕವಾಗಿ ವ್ಯವಸ್ಥೆ ಜೋಡಿಸಿಕೊಳ್ಳಬೇಕಿದೆ ಎಂದು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಫೆ.25ರಿಂದ ಮಾರ್ಚ್ 5ರವರೆಗೆ ನಡೆಯಲಿರುವ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ-ಹೊರೆಕಾಣಿಕೆ ಸಮಿತಿ ನೇತೃತ್ವದಲ್ಲಿ ಹೊರೆಕಾಣಿಕೆ ಸಂಗ್ರಹಣೆ ಕುರಿತು ಭಾನುವಾರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಉಡುಪಿ ಪರ್ಯಾಯ ಮಾದರಿಯಲ್ಲೇ ಅದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಹೊರೆ ಕಾಣಿಕೆ ಸಂಗ್ರಹಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಪು ದಿವಾಕರ ಶೆಟ್ಟಿ ಮಾತನಾಡಿ, ಭಕ್ತರ ದೇಣಿಗೆಯಿಂದ ನಿರ್ಮಾಣಗೊಂಡಿರುವ ಸ್ವರ್ಣ ಗದ್ದುಗೆ ಮತ್ತು ತೋನ್ಸೆ ಆನಂದ ಶೆಟ್ಟಿ ಸಮರ್ಪಿಸಲಿರುವ ರಜತ ರಥದ ಪುರಪ್ರವೇಶ ಶೋಭಾಯಾತ್ರೆ ಫೆ. 9ರಂದು ಸಂಜೆ 3ಕ್ಕೆ ದಂಡತೀರ್ಥ ಮಠದಿಂದ ಆರಂಭಗೊಳ್ಳಲಿದೆ. ಮುಂಬೈ ಮಹೇಶ್ ಕೋಟ್ಯಾನ್ ಸಮರ್ಪಿಸುವ ಮಾರಿಯಮ್ಮ ದೇವಿಯ ಸ್ವರ್ಣ ಮುಖ, ಉಚ್ಚಂಗಿ ದೇವಿ ಸ್ವರ್ಣ ಮುಖ, ಅಯೋಧ್ಯೆಯಲ್ಲಿ ಅಳವಡಿಸಿರುವ ಮಾದರಿ ಬೃಹತ್ ಗಂಟೆಯನ್ನೂ ಮೆರವಣಿಗೆಯಲ್ಲಿ ತರಲಾಗುವುದು ಎಂದರು.

ಸಮಿತಿ ಗೌರವಾಧ್ಯಕ್ಷ ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಲಾಲಾಜಿ ಆರ್.ಮೆಂಡನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಆಡಳಿತ ಮೊಕ್ತೇಸರ ಮನೋಹರ ಎಸ್.ಶೆಟ್ಟಿ ಕಾಪು, ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ದಯಾನಂದ ಸುವರ್ಣ ಹೆಜಮಾಡಿ, ಕಾಪು ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಸ್ವರ್ಣ ಸಮರ್ಪಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಪು ದಿವಾಕರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಳಿಕೆ, ಪ್ರಮುಖರಾದ ಜಯ ಸಿ.ಕೋಟ್ಯಾನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಕಸ್ತೂರಿ ಪಂಜ, ಹರೀಶ್ ನಾಯಕ್ ಕಾಪು ಉಪಸ್ಥಿತರಿದ್ದರು. ಹೊರೆಕಾಣಿಕೆ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಪಾದೂರು ವಂದಿಸಿದರು. ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಅದ್ಭುತ ರೀತಿಯಲ್ಲಿ ಜೀರ್ಣೋದ್ಧಾರಗೊಂಡಿರುವ ಕಾಪು ಮಾರಿಯಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಸಮಿತಿ ಆಶಯಕ್ಕೆ ಪೂರಕವಾಗಿ ರಾಜ್ಯ ಸರ್ಕಾರದ ವಿಶೇಷ ಅನುದಾನ, ಸಹಕಾರಕ್ಕೂ ಪ್ರಯತ್ನಿಸಲಾಗುತ್ತಿದೆ. ನಾವೆಲ್ಲರೂ ಜತೆಗೂಡಿ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ, ಅನ್ನಸಂತರ್ಪಣೆ ಯಶಸ್ವಿಗೊಳಿಸಲು ಕೈ ಜೋಡಿಸೋಣ. -ವಿನಯ್ ಕುಮಾರ್ ಸೊರಕೆ ಸಮಿತಿ ಗೌರವಾಧ್ಯಕ್ಷ ಮಾರಿಯಮ್ಮ ದೇವಿ ಅಪ್ಪಣೆ ಪ್ರಕಾರ ದ.ಕ. ಜಿಲ್ಲೆಯ ಸುಳ್ಯ, ಪುತ್ತೂರು ಗಡಿಭಾಗದಿಂದ, ಉಡುಪಿ ಜಿಲ್ಲೆಯ ಬೈಂದೂರು, ಕಾರ್ಕಳವರೆಗಿನ ಎಲ್ಲಾ ಶಾಸಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಹೊರೆಕಾಣಿಕೆ ಸಂಗ್ರಹಿಸಲು ನಿರ್ಧರಿಸಲಾಗಿದೆ. ಫೆ.22ರಂದು ದ.ಕ. ಜಿಲ್ಲೆಯಿಂದ ಹೆಜಮಾಡಿ ಮತ್ತು ಉಚ್ಚಿಲ ಮೂಳೂರು ಬಳಿ ಸಂಗ್ರಹಿಸಿ, ಫೆ.23ರಂದು ಉಡುಪಿ ಜಿಲ್ಲೆಯಿಂದ ಕಟಪಾಡಿ ಮತ್ತು ಪಾಂಗಾಳ ಸೇತುವೆ ಬಳಿ ಸಂಗ್ರಹಿಸಿದ ಹೊರೆಕಾಣಿಕೆ ಸಮರ್ಪಿಸಲಾಗುವುದು. -ದೇವಿಪ್ರಸಾದ್ ಶೆಟ್ಟಿ ಬೆಳಪು ಹೊರೆಕಾಣಿಕೆ ಸಮಿತಿ ಅಧ್ಯಕ್ಷ https://www.vijayavani.net/enrich-your-mind-with-yoga-and-meditation https://www.vijayavani.net/moral-values-in-students-through-drama