ಮುಧೋಳ ನಗರದ ಪ್ರಗತಿ ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣೆ, ಶಸ್ತ್ರ ಚಿಕಿತ್ಸೆ ಹಾಗೂ ರಕ್ತದಾನ ಶಿಬಿರ ನಡೆಯಿತು. ಅಬಕಾರಿ ಸಚಿವ ಅರ್.ಬಿ. ತಿಮ್ಮಾಪುರ, ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ನ್ಯಾಯವಾದಿ ಐ.ಎಚ್. ಅಂಬಿ ಇದ್ದರು. 
ಜಿಲ್ಲೆ

ರಕ್ತದಾನದಿಂದ ಜೀವದಾನ ಮಾಡಿದ ಪುಣ್ಯ ಲಭ್ಯ

ಮುಧೋಳ: ಯುವ ಸಂಘಟನೆಗಳು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಬಡವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಜನತಾ ಸುಲ್ತಾನ್ ಸಂಘಟನೆ ಕೈಗೊಳ್ಳುತ್ತಿರುವ ಸಾಮಾಜಿಕ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ನಗರದ ಪ್ರಗತಿ ಶಾಲೆಯಲ್ಲಿ ಗುರುವಾರ ಜನತಾ ಸುಲ್ತಾನ್ ಸಂಘಟನೆಯ ದಶಮಾನೋತ್ಸವ ಹಿನ್ನೆಲೆ ವೀರಭದ್ರೇಶ್ವರ ರಕ್ತ ಕೇಂದ್ರ ಮುಧೋಳ ಹಾಗೂ ಜನತಾ ಸುಲ್ತಾನ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಣ್ಣಿನ ಉಚಿತ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತದಾನದಿಂದ ಜೀವದಾನ ಮಾಡಿದ ಪುಣ್ಯ ಬರುತ್ತದೆ. ಹೆಚ್ಚಿನ ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು. ಆಧುನಿಕ ಯುಗದಲ್ಲಿ ಅನೇಕ ಯುವಕ ಸಂಘಗಳು ವಾರ್ಷಿಕೋತ್ಸವ ಹಾಗೂ ಇನ್ನಿತರ ಸಮಾರಂಭದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಆಚರಣೆಗೆ ಮಾರುಹೋಗಿರುವ ಸನ್ನಿವೇಶದಲ್ಲಿ ಜನತಾ ಸುಲ್ತಾನ್ ಸಂಘದ ಸದಸ್ಯರು ಬಡರೋಗಿಗಳ ಅನುಕೂಲಕ್ಕಾಗಿ ಹಮ್ಮಿಕೊಂಡಿರುವ ಆರೋಗ್ಯ ಶಿಬಿರ ಅತ್ಯಂತ ಸ್ತುತ್ಯಾರ್ಹ ಎಂದರು.

ಜನತಾ ಸುಲ್ತಾನ್ ಅಧ್ಯಕ್ಷ ಶಫೀಕ್ ಬೇಪಾರಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ನ್ಯಾಯವಾದಿ ಐ.ಎಚ್. ಅಂಬಿ, ಬಸವಂತ ಕಾಟೆ, ಉದಯಸಿಂಗ್ ಪಡತಾರೆ, ಮೌಲಾನ ಅನ್ನಿಗೇರಿ, ಯೂನೂಸ್ ಕುಡಚಿ, ಐ.ಆರ್. ರಾಮದುರ್ಗ, ರಾಘು ಮೂಕಾಶಿ, ಎಂ. ಗೌಸ್, ಜಾವೀದ್ ಹವಾಲ್ದಾರ, ಶರೀಫ ಮುಲ್ಲಾ, ಅಲ್ಲಾಭಕ್ಷ ಪಠಾಣ, ರಿಯಾಜ್ ಆಲಗುಂಡಿ, ಸಮೀರ್ ಪಟೇಲ, ಗೌಸು ಸೋರನಾಸಿ, ಸಿಪಿಐ ಮಹಾದೇವ ಶಿರಹಟ್ಟಿ ಇತರರಿದ್ದರು.