ಸಿರಗುಪ್ಪ: ಪೂರ್ವಜರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ಸಾಗಬೇಕು ಎಂದು ಹಾಲ್ವಿಯ ಅಭಿನವ ಮಹಾಂತ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಜೀವಿಗಳ ಮೋಕ್ಷ ಜೈನ ಧರ್ಮದ ಸಂದೇಶ : ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ
ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಶನಿವಾರ ತಾಯಮ್ಮ ದೇವಿ ದೇವಸ್ಥಾನ, ವಿಗ್ರಹ ಮೂರ್ತಿ, ಧ್ವಜಸ್ತಂಭ ಪ್ರತಿಷ್ಠಾಪನೆ ಹಾಗೂ ಗೋಪುರ ಕಳಸ ಅನಾವರಣ ಸಮಾರಂಭದಲ್ಲಿ ಮಾತನಾಡಿದರು.
ಆಚಾರಕ್ಕೆ ದೇವಾಲಯ, ವಿಚಾರಕ್ಕೆ ಶಾಲೆ, ಜೀವ ಜಲಕ್ಕೆ ಕೆರೆ ಕಟ್ಟೆಗಳು ಇದ್ದರೆ ಗ್ರಾಮೀಣ ಭಾಗ ಸಮೃದ್ಧಿಯಾಗಿ ಸಮತೋಲನದಿಂದ ಕೂಡಿರುತ್ತದೆ. ಹಿರಿಯರ ಸಂಪ್ರದಾಯ ಪಾಲಿಸಿ, ನಮ್ಮಿಂದ ಸಾಧ್ಯವಾದಷ್ಟು ಮತ್ತೊಬ್ಬರಿಗೆ ದಾನ ನೀಡುವುದರಿಂದ ಘನತೆ ಜತೆಗೆ ಜೀವನದಲ್ಲಿ ಯಶಸ್ಸು ಮತ್ತು ಮೋಕ್ಷ ಸಿಗುತ್ತದೆ ಎಂದರು. ಚನ್ನವೀರ ಶಿವಾಚಾರ್ಯ ಸ್ವಾಮೀಜಿ ದೇವಿಯ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ನೆರವೇರಿಸಿದರು.
ಶ್ರೀರಾಘವೇಂದ್ರ ಪ್ರಸಾದ್, ಸುಬ್ಬರಾಮ ಶಾಸ್ತ್ರಿ, ಚನ್ನಬಸವಸ್ವಾಮಿ ಪುರೋಹಿತ ತಂಡ, ಸುಪ್ರಭಾತ ಸೇವೆ, ಗೋಪುರ ಕಳಸ ಸ್ಥಾಪನೆ, ಸುದರ್ಶನ ಹೋಮ, ಬಲಿಹರಣ, ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನೆರವೇರಿಸಿದರು. ಹಳೇಕೋಟೆ ಮಲ್ಲಿಕಾರ್ಜುನ ಸ್ವಾಮೀಜಿ, ಬಸವ ಭೂಷಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದಾನಿಗಳಾದ ವೈ.ಪಿಚ್ಚೇಶ್ವರ ರಾವ್, ಬಿ.ಇ.ಪಂಪಣ್ಣ, ಬಿ.ಇ.ಮಂಜಪ್ಪ, ಬಿ.ಇ.ಭೀಮೇಶ ಅವರನ್ನು ಶ್ರೀಗಳು ಗೌರವಿಸಿದರು.
ಗ್ರಾಪಂ ಅಧ್ಯಕ್ಷ ಕಾಮಾಕ್ಷಮ್ಮ ಶರಣಪ್ಪ, ಸದಸ್ಯರಾದ ಶಿವಣ್ಣ, ಸಣ್ಣರಾಮಯ್ಯ, ಉಪ್ಪಳಪ್ಪ, ಕ್ಯಾತರಿ ಲಿಂಗಪ್ಪ, ಪಂಪಯ್ಯ ನಾಯಕ ಮತ್ತು ಪಟ್ಟೆದ್ ದೇವೇಂದ್ರಪ್ಪ, ಈರಣ್ಣ, ಸೋಮನಾಥಸ್ವಾಮಿ, ಉಲ್ತಿ ಭೀಮಣ್ಣ, ಗಾದಿಲಿಂಗಪ್ಪ ನಾಯಕ, ಯಲ್ಲಪ್ಪ, ಪೂಜಾರಿ ಅಯ್ಯಪ್ಪ, ಪ್ರಮುಖರಾದ ಪಿ.ಚಂದ್ರಮೌಳಿ, ಬಸವರಾಜಯ್ಯ ಹಿರೇಮಠ, ಮುದುಕಪ್ಪ ನಾಯಕ ಇದ್ದರು.