ಚನ್ನಮ್ಮ ಕಿತ್ತೂರಿನಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಹನುಮಂತ ಕೊಟಬಾಗಿ ಅವರು ಬಡವರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದರು. ಈರಣ್ಣ ಮಾರಿಹಾಳ, ಜಗದೀಶ ವಸ್ತ್ರದ ಇತರರಿದ್ದರು. 
ಜಿಲ್ಲೆ

ಉಳ್ಳವರು ಬಡವರಿಗೆ ದಾನ ಮಾಡಲಿ

ಚನ್ನಮ್ಮಕಿತ್ತೂರು: ಕರೊನಾ ವೈರಸ್ ಹಾವಳಿ ತಡೆಯಲು ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಇದರಿಂದ ದೇಶದಲ್ಲಿ ಬಡವರು, ನಿರ್ಗತಿಕರು ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಉಳ್ಳವರು ದಾನ, ಧರ್ಮ ಮಾಡುವ ಕಾರ್ಯ ಮಾಡಬೇಕು ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಹನುಮಂತ ಕೊಟಬಾಗಿ ಹೇಳಿದರು.

ಪಟ್ಟಣದ ವಿಠ್ಠಲ ದೇವರ ದೇವಸ್ಥಾನದಲ್ಲಿ ಅವರು 20ಕ್ಕೂ ಹೆಚ್ಚು ಬಡವರಿಗೆ ಆಹಾರ ಧಾನ್ಯದ ಕಿಟ್ ವಿತರಿಸುವ ಜತೆಗೆ ಧನಸಹಾಯ ಮಾಡಿದರು. ಕಿನಾವಿವ ಸಂಸ್ಥೆಯ ಅಧ್ಯಕ್ಷ ಈರಣ್ಣ ಮಾರಿಹಾಳ ಮಾತನಾಡಿ, ಬಡವರು, ಕಾರ್ಮಿಕರು ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಇವರಿಗೆ ಕೈಲಾದಷ್ಟು ಎಲ್ಲರೂ ಸಹಾಯ ಮಾಡುವ ಅಗತ್ಯವಿದೆ. ಹನುಮಂತ ಕೊಟಬಾಗಿ ಅವರು ಕಿತ್ತೂರು ಸೇರಿ ತಾಲೂಕಿನಲ್ಲಿರುವ 20ಕ್ಕೂ ಹೆಚ್ಚು ಗ್ರಾಮಗಳಲ್ಲಿನ ಬಡವರಿಗೆ ಕಿಟ್‌ಗಳನ್ನು ವಿತರಿಸುವ ಮೂಲಕ ಮಾದರಿಯಾಗಿದ್ದಾರೆ ಎಂದರು. ಕಿನಾವಿವ ಸಂಘದ ಗೌರವ ಕಾರ್ಯದರ್ಶಿ ಜಗದೀಶ ವಸ್ತ್ರದ, ಉಪಾಧ್ಯಕ್ಷ ವಿಶ್ವನಾಥ ಶೆಟ್ಟರ, ಶಿವಾನಂದ ಜಕಾತಿ, ಸಚಿನ ಮಾರಿಹಾಳ, ಪಟ್ಟಣ ಪಂಚಾಯಿತಿ ಸದಸ್ಯರಾದ ಹನುಮಂತ ಲಂಗೋಟಿ, ಸಂಗೀತಾ ನಾಗಲಾಪುರ, ಕೃಷ್ಣಾ ಕೊಟಬಾಗಿ, ಸುಧನ್ವ ಕೊಟಬಾಗಿ, ರಾಮು ಡವಳೆ ಇತರರು ಇದ್ದರು.