ಹರಪನಹಳ್ಳಿ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ರಕ್ತದಾನ ಶಿಬಿರ ನಡೆಯಿತು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಭಾಸ್ಕರ್ ರಾವ್, ವೈದ್ಯರಾದ ವೆಂಕಟೇಶ, ಹಾಲಸ್ವಾಮಿ, ಸಿಬ್ಬಂದಿ ರುದ್ರಚಾರಿ, ಗೌರಮ್ಮ ಭುವನೇಶ್ವರಿ ಸಂತೋಷ ಇತರರಿದ್ದರು. 
ಜಿಲ್ಲೆ

ಪ್ರಾಣ ಉಳಿಸಲು ರಕ್ತದಾನ ಮಾಡಿ

ರುದ್ರಪ್ಪ ವಾಲಿ

ಹರಪನಹಳ್ಳಿ: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆರೋಗ್ಯ ಇಲಾಖೆಯಿಂದ ಬುಧವಾರ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ತಹಸೀಲ್ದಾರ್ ಬಿ.ವಿ.ಗಿರೀಶಬಾಬು ಚಾಲನೆ ನೀಡಿ ಮಾತನಾಡಿ, ರಕ್ತದಾನ ಮಾಡುವುದು ಅತ್ಯಂತ ಮಹತ್ತರ ಕಾರ್ಯವಾಗಿದೆ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಹಲವರ ಪ್ರಾಣ ಉಳಿಸಬಹುದು ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಪೃಥ್ವಿ ಮಾತನಾಡಿ, ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗಲಿದೆ ಹಾಗೂ ಜ್ಞಾಪಕ ಶಕ್ತಿ ಹೆಚ್ಚಲಿದೆ. ಹೃದಯಾಘಾತ, ರಕ್ತದ ಒತ್ತಡದಂತಹ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದರು. ಸಾರ್ವಜನಿಕ ಆಸ್ಪತ್ರೆ, ನ್ಯಾಯಾಲಯ, ಅರಸೀಕೆರೆ, ತೆಲಗಿಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಪ್ರಮುಖರಾದ ಎಂ.ವಿ.ಅಂಜಿನಪ್ಪ, ಕೊಟ್ಟೂರು ಪ್ರದೀಪ್, ಅಲ್ತಾಫ್, ಮತ್ತಿಗಿ ಜಂಬಣ್ಣ, ಉದ್ದಾರ ಗಣೇಶ, ಬಾಣದ ಅಂಜಿನಪ್ಪ, ಮಹಾಂತೇಶನಾಯ್ಕ್ ಇತರರಿದ್ದರು.