ಯಲಬುರ್ಗಾ ತಾಲೂಕಿನ ಕಲ್ಲೂರು ಶ್ರೀ ಕಲ್ಲಿನಾಥೇಶ್ವರ ಕಾರ್ತಿಕೋತ್ಸವ ನಿಮಿತ್ತ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಸಂಸ್ಥೆಯ ದೇವೇಂದ್ರಪ್ಪ, ಪ್ರಾಥಮಿಕ ಆರೋಗ್ಯ ಅಧಿಕಾರ ಶ್ರೀದೇವಿ, ಪಿಡಿಒ ರೇಣುಕಾ, ಗಣ್ಯರಾದ ಮಂಜುನಾಥ, ಸಂಗಪ್ಪ ಹೂಗಾರ, ಲಕ್ಷ್ಮಣ ಸಂಗನಾಳ, ಕಲ್ಲೇಶ ಇದ್ದರು. 
ಜಿಲ್ಲೆ

ರಕ್ತದಾನದಿಂದ ಜೀವ ಉಳಿಸಿ

Kopala - Desk - Eraveni

ಯಲಬುರ್ಗಾ: ಆರೋಗ್ಯವಂತ ಯುವಕ, ಯುವತಿಯರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಕೊಪ್ಪಳ ರೆಡ್ ಕ್ರಾಸ್ ಸಂಸ್ಥೆಯ ದೇವೇಂದ್ರಪ್ಪ ಹೇಳಿದರು.

ತಾಲೂಕಿನ ಕಲ್ಲೂರು ಗ್ರಾಮದ ಶ್ರೀ ಕಲ್ಲಿನಾಥೇಶ್ವರ ಕಾರ್ತಿಕೋತ್ಸವ ನಿಮಿತ್ತ ಗ್ರಾಪಂ, ರೆಡ್ ಕ್ರಾಸ್ ಸಂಸ್ಥೆ, ಆರೋಗ್ಯ ಇಲಾಖೆ, ಸ್ವಾಮಿ ವಿವೇಕಾನಂದ ಯುವಕ ಸಂಘ, ಭಗತ್ ಸಿಂಗ್ ಯುವಕ ಸಂಘ, ಸ್ವಗ್ರಾಮ ಫೆಲೋಶಿಪ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ರಕ್ತದಾನ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬಹುದು. ಅಲ್ಲದೇ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆ. ಸಾವು ಬದುಕಿನ ನಡುವೆ ಹೋರಾಡುವವರನ್ನು ಕಾಪಾಡಲು ಅನುಕೂಲವಾಗುತ್ತದೆ ಎಂದರು.

ಪ್ರಾಥಮಿಕ ಆರೋಗ್ಯ ಅಧಿಕಾರ ಶ್ರೀದೇವಿ, ಪಿಡಿಒ ರೇಣುಕಾ, ಗಣ್ಯರಾದ ಮಂಜುನಾಥ, ಸಂಗಪ್ಪ ಹೂಗಾರ, ಲಕ್ಷ್ಮಣ ಸಂಗನಾಳ, ಕಲ್ಲೇಶ ಕುದರಿಮನಿ, ದೊಡ್ಡಯ್ಯ ಪಟ್ಟಣಶೆಟ್ಟಿ, ಅಭಿಷೇಕ ತೊಂಡಿಹಾಳ, ಶಿವಕುಮಾರ ಗುಮತಿ ಇತರರಿದ್ದರು.