ಮಾನ್ವಿ: ರಕ್ತದಾನದಿಂದ ಗರ್ಭಿಣಿ ಮಹಿಳೆಯರಿಗೆ ಅಪಘಾತ ವೇಳೆ, ಶಸ್ತ್ರ ಚಿಕಿತ್ಸೆ ವೇಳೆಯಲ್ಲಿ ರಕ್ತದ ಅವಶ್ಯಕತೆಯಿದ್ದು ಪ್ರತಿಯೊಬ್ಬರು ರಕ್ತ ದಾನ ಮಾಡಿ ಇನ್ನೊಬ್ಬರ ಜೀವ ಉಳಿಸಬೇಕು ಎಂದು ಆರೋಗ್ಯ ಆಸ್ಪತ್ರೆ ವೈದ್ಯ ಎಂ.ಎಸ್.ಆಸಿಫ್ ಹೇಳಿದರು.
ಇದನ್ನೂ ಓದಿ: ಮೋದಿ ಜನ್ಮದಿನ : ರಕ್ತದಾನ ಮಾಡಿದ ರೂಪಾಲಿ ನಾಯ್ಕ
ಪಟ್ಟಣದ ಆರೋಗ್ಯ ಆಸ್ಪತ್ರೆಯಲ್ಲಿ ಭಾನುವಾರ ಜಮಾತ್ ಇಸ್ಲಾಮಿ ಹಿಂದ್ ತಾಲೂಕು ಘಟಕದಿಂದ ಮುಹಮ್ಮದ್(ಸ.ಅ) ಸೀರತ್ ಅಭಿಯಾನದ ಅಂಗವಾಗಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಕ್ತದಾನ ಮಹಾದಾನವಾಗಿದೆ. ಪುರುಷರು ಮತ್ತು ಮಹಿಳೆಯರು ಪ್ರತಿ ಮೂರು ತಿಂಗಳಿಗೆ ಒಮ್ಮೆ ರಕ್ತ ದಾನ ಮಾಡಬೇಕು ಎಂದರು. 30 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
ಹಿರಿಯ ವೈದ್ಯೆ ರೋಹಿಣಿ ಮಾನ್ವಿಕರ್, ಜಮಾತ್ ಇಸ್ಲಾಮೀ ಹಿಂದ್ ತಾಲೂಕು ಅಧ್ಯಕ್ಷ ಅಬ್ದುಲ್ ರೆಹಮಾನ್‌ಸಾಬ್, ಕಾರ್ಯದರ್ಶಿ ಸಬ್ಜಲಿ ಮಾಸ್ಟರ್, ಪ್ರಮುಖರಾದ ಎಂ.ಎ.ಎಚ್ ಮುಖೀಮ್, ಉಮರ್ ಫಾರೂಕ್ ದೇವರಮನಿ, ಜನಾಬ್ ಕರೀಂಖಾನ್ ಸಾಬ್, ಸೈಯದ್ ಅಕ್ಬರ್ ಪಾಷಾ, ದಾವುದ್ ಸಿದ್ಧಿಕಿ ಸಾಬ್, ಅಬ್ದುಲ್ ರೌಫ್ ಸಾಬ್, ಎ.ಕೆ.ಜಾಗಿರ್ದಾರ್ ಸಾಹೇಬ್, ಇಮ್ತಿಯಾಜ್ ವಕೀಲರು ಇನ್ನಿತರರು ಇದ್ದರು.