ರಕ್ತದಾನ ಮಾಡಿ ಜೀವ ಉಳಿಸಿ
ವಿಜಯವಾಣಿ ಸುದ್ದಿಜಾಲ ಧಾರವಾಡ
ರಕ್ತದಾನದ ಬಗ್ಗೆ ಜಾಗೃತಿ ಕಾರ್ಯಕ್ರಮಗಳಾಗುತ್ತಿದ್ದರೂ ರಕ್ತದ ಕೊರತೆ ಇದೆ. ವಿಶೇಷವಾಗಿ ಯುವಕರು ರಕ್ತದಾನ ಮಾಡುವ ಮೂಲಕ ಇತರರ ಜೀವ ಉಳಿಸುವ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಹು-ಧಾ ಬಂಟರ ಸಂಘದ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ಅಧ್ಯಕ್ಷ ವಿಜಯಾನಂದ ಶೆಟ್ಟಿ ಹೇಳಿದರು.
ನಗರದ ಯಕ್ಷಸಾರಥಿ ಗೆಳೆಯರ ಬಳಗದ ವತಿಯಿಂದ 4ನೇ ವರ್ಷದ ಭವ್ಯ ಯಕ್ಷವೈಭವದ ಅಂಗವಾಗಿ ಇಲ್ಲಿನ ನೌಕರರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಯ ಡಾ. ಉಮೇಶ ಹಳ್ಳಿಕೇರಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಧಾರವಾಡ ಶಾಖೆಯ ಅಧ್ಯಕ್ಷ ಡಾ. ಮಹಾಂತೇಶ ವೀರಾಪೂರ, ಪಂಜುರ್ಲಿ ಗ್ರುಪ್ ಸಂಸ್ಥಾಪಕ ರಾಜೇಂದ್ರ ಶೆಟ್ಟಿ, ರಾಜು ಶೆಟ್ಟಿ, ಡಾ. ದಿನೇಶ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಶಿಬಿರದಲ್ಲಿ ಅನೇಕರು ಸ್ವಯಂಪ್ರೇರಣೆಯಿ0ದ ರಕ್ತದಾನ ಮಾಡಿದರು. ಕ್ಯಾನ್ಸರ್ ಸಂಬ0ಧಿತ ಚಿಕಿತ್ಸೆಗಳ ಬಗ್ಗೆ ಅರಿವು ಮೂಡಿಸಲಾಯಿತು.