ಜಿಲ್ಲೆ

ರಕ್ತದಾನ ಮಾಡಿ ಜೀವ ಉಳಿಸಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಆಯಾ ಕಾಲಕ್ಕೆ ಒಂದೊಂದು ದಾನ ಶ್ರೇಷ್ಠವಾಗಿರುತ್ತದೆ. ಆದರೆ ಒಂದು ಜೀವ ಉಳಿಸಲು ರಕ್ತದಾನವೇ ಅತ್ಯಂತ ಶ್ರೇಷ್ಠ ದಾನವಾಗಿದೆ. ಹೀಗಾಗಿ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಬೇಕು ಎಂದು ವೈದ್ಯ ಡಾ.ಮಹೇಶ ಪಾಟೀಲ ಹೇಳಿದರು.
ನಗರದ ಶಿವಕೃಪಾ ಟ್ರಸ್ಟ್​ ಹಾಗೂ ಹುಬ್ಬಳ್ಳಿಯ ರಾಷ್ಟ್ರೊತ್ಥಾನ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಇಲ್ಲಿನ ಆದರ್ಶ ಬಾಲಕಿಯರ ಪ್ರೌಢ ಶಾಲೆ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನದಿಂದ ಯಾವುದೇ ಜೀವ ನಷ್ಟವಾಗಲ್ಲ. ಇದರಿಂದ ರಕ್ತದಾನಿಗೂ ಬದುಕಿಗೆ ಚೈತನ್ಯ ಬರಲಿದೆ. ಯಾವುದೇ ದೌರ್ಬಲ್ಯವೂ ತರುವುದಿಲ್ಲ. ಅನೇಕ ರೋಗಗಳಿಗೂ ಪರಿಹಾರವಾಗಲಿದೆ. ರಕ್ತದಲ್ಲಿ ಬಿಳಿ ರಕ್ತಕಣ, ಪ್ಲಾಸ್ಮಾ ಹೀಗೆ ವಿಂಗಡಿಸಲಿದೆೆ. ಕೇವಲ ಒಬ್ಬ ವ್ಯಕ್ತಿ ಮಾಡುವ ರಕ್ತದಾನ, ಹಲವು ರೋಗಿಗಳಿಗೆ ಅನಕೂಲ ಆಗಲಿದೆ. ಹೀಗಾಗಿ ವರ್ಷಕ್ಕೆ ಎರಡ್ಮೂರು ಬಾರಿ ರಕ್ತದಾನ ಮಾಡುವಂತೆ ತಿಳಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು, ಯುವಕರು ರಕ್ತದಾನ ಮಾಡಿದರು. ಬೆಳಿಗ್ಗೆಯಿಂದ ಮಧ್ಯಾಹ್ನವರೆಗೆ ನಡೆದ ಶಿಬಿರದಲ್ಲಿ ಒಟ್ಟು 25 ಯೂನಿಟ್​ ರಕ್ತ ಸಂಗ್ರಹ ಮಾಡಲಾಯಿತು.
ಶಿವಕೃಪಾ ಟ್ರಸ್ಟ್​ ಅಧ್ಯಕ್ಷ ಅಮರನಾಥ ಟಿಕಾರೆ, ರಾಷ್ಟ್ರೊತ್ಥಾನ ರಕ್ತದಾನ ಕೇಂದ್ರದ ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ, ವೆಂಕಟೇಶ ಕರಿಕಲ್ಲ, ಆರ್​.ಎಂ. ಕುಲಕರ್ಣಿ, ರವಿ ಕಾಮತ್​, ಇತರರು ಇದ್ದರು.