ಕೆ.ಎಂ.ದೊಡ್ಡಿ : ವಿಧಾನ ಪರಿಷತ್ ಸದಸ್ಯ, ಬಿಇಟಿ ಟ್ರಸ್ಟ್ ಚೇರ್ಮನ್ ಮಧು ಜಿ.ಮಾದೇಗೌಡ ಅವರ 60ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಬುಧವಾರ ನಡೆಯಿತು.
ಭಾರತೀ ವಿದ್ಯಾಸಂಸ್ಥೆಯ ಆವರಣದಲ್ಲಿರುವ ಡೈಮಂಡ್ ಜ್ಯುಬಿಲಿ ಬ್ಲಾಕ್‌ನಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿಗಳು, ಅಂಗ ಸಂಸ್ಥೆಗಳ ಬೋಧಕ-ಬೋಧಕೇತರರು ಮತ್ತು ವಿದ್ಯಾರ್ಥಿ ವೃಂದ ಮತ್ತು ಮಧು ಜಿ. ಮಾದೇಗೌಡ ಅಭಿಮಾನಿ ಬಳಗ, ಆಶಯ್ ಜಿ. ಮಧು ಅಭಿಮಾನಿ ಬಳಗ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್), ಮಂಡ್ಯ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿತ್ತು.
ರಕ್ತದಾನ ಶಿಬಿರಕ್ಕೆ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದಿಟ್ಟ ಹೋರಾಟಗಾರ, ಹಿರಿಯ ಗಾಂಧಿವಾದಿ, ಮಾಜಿ ಸಂಸದ ದಿವಂಗತ ಜಿ. ಮಾದೇಗೌಡ ಅವರ ಪುತ್ರರಾಗಿರುವ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದು, ಬೃಹತ್ ರಕ್ತದಾನ ಶಿಬಿರ ಆಯೋಜಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸಿ. ಇದರಿಂದ ನಿಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಎಂದು ಕಿವಿಮಾತು ಹೇಳಿದರು.
ಭಾರತೀ ಹೆಲ್ತ್‌ಸೈನ್ಸ್‌ಸ್ ನಿರ್ದೇಶಕ ಡಾ.ತಮಿಜ್‌ಮಣಿ, ವಿವಿಧ ವಿಭಾಗದ ಪ್ರಾಂಶುಪಾಲರಾದ ಡಾ.ಬಾಲಸುಬ್ರಮಣ್ಯಂ, ಡಾ, ಜಗದೀಶ್, ಡಾ. ಶಾಂತಕುಮಾರ್, ಡಾ. ಮಹೇಶ್‌ಕುಮಾರ್ ಜಿ.ಲೋನಿ, ಡಾ. ಮಂಜು ಎಂ. ಜೆಕಪ್, ಡಾ. ಪ್ರಮಿಳಾ, ಡಾ ಸ್ವರೂಪಾ, ಡಾ. ವಿಘ್ನೇಶ್ವರಿ, ಡಾ. ಬಿ.ಎಸ್. ಸುರೇಶ್, ಡಾ. ಮನು, ರಶ್ಮಿ, ತಾ.ಪಂ ಮಾಜಿ ಸದಸ್ಯರಾದ ಭರತೇಶ್, ಬಿ.ಗರೀಶ್, ಮುಖಂಡರಾದ ಅಣ್ಣೂರು ಸಿದ್ದಪ್ಪ, ಸ್ವರೂಪ್ ಸೇರಿದಂತೆ ಮತ್ತಿತರಿದ್ದರು.