ಜಿಲ್ಲೆ

ರಕ್ತದಾನ ಮಾಡಿ ಮತ್ತೊಂದು ಜೀವ ಉಳಿಸಿ

ಬಸವರಾಜ ವೀರಪ್ಪ ಗರಗ

ಕುಂದಗೋಳ: ಅಪಘಾತವಾದ ಸಂದರ್ಭದಲ್ಲಿ ಜೀವ ಉಳಿಸಲು ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಜೀವ ಉಳಿಸಲು ಮುಂದಾಗಬೇಕು ಎಂದು ಕೆಪಿಸಿಸಿ ಸದಸ್ಯ ಚಂದ್ರಶೇಖರ ಜುಟ್ಟಲ್ ಹೇಳಿದರು.

ತಾಲೂಕಿನ ಕಮಡೊಳ್ಳಿ ಗ್ರಾಮದ ಶ್ರೀ ಸಿದ್ಧಾರೂಢಮಠದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ತಾಲೂಕು ವೈದ್ಯಾಧಿಕಾರಿ ವಿದ್ಯಾವತಿ ಪಾಟೀಲ ಮಾತನಾಡಿ, ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಜತೆಗೆ ಮತ್ತೊಂದು ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದರು.

ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ನೀರಲಗಿ, ಉಪಾಧ್ಯಕ್ಷ ದಾದಾಪೀರ್ ಗುಡಗೇರಿ, ಡಾ. ಪರಶುರಾಮ, ಡಾ. ಪ್ರಭು ಸಂಗಮ, ರವಿ ಉದ್ದಣ್ಣವರ, ಶಂಭುಲಿಂಗ ಹಸಬಿ, ಗ್ರಾಪಂ ಸದಸ್ಯರು ಇದ್ದರು. ಸವಿತಾ ಕೆ., ಅಬ್ದುಲ್​ಸಾಬ್ ಸುಲ್ತಾನವರ, ಶಂಕ್ರಮ್ಮ ಭೀಮನಗೌಡ್ರ ಹಾಗೂ ಬಸವರಾಜ ಹಮಗಿ ಕಾರ್ಯಕ್ರಮ ನಿರ್ವಹಿಸಿದರು.