ಜಿಲ್ಲೆ

ಶಾಲೆಗೆ ಧ್ವನಿವರ್ಧಕ ದಾನ

Davangere - Desk - Mahesh Babu E

ಚಳ್ಳಕೆರೆ: ನಗರದ ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಬಿ.ಕೆ.ಮಾಧವರಾಜ್, ವರ್ಗಾವಣೆಗೊಂಡ ಶಿಕ್ಷಕರಾದ ಶಿವಕೀರ್ತಿ, ಪ್ರಕಾಶ್, ಜ್ಯೋತಿ ಅವರು ಶಾಲೆಗೆ ಧ್ವನಿವರ್ಧಕ ಹಾಗೂ ಇತರ ಪರಿಕರಗಳನ್ನು ಬುಧವಾರ ವಿತರಿಸಿದರು.

ಮುಖ್ಯಶಿಕ್ಷಕಿ ವಾಣಿ, ಸಹಶಿಕ್ಷಕರಾದ ಬಿ.ರಾಜ್‌ಕುಮಾರ್, ಶಿವಣ್ಣ, ಸುಜಾತಾ, ಪ್ರಮೀಳಾ, ಬಿ.ಎಲ್.ಉಮಾ, ಪ್ರಾಣೇಶ್, ಪ್ರದೀಪ್, ಗಂಗೂಬಾಯಿ, ನಾಗರತ್ನ, ರಂಗಸ್ವಾಮಿ ಇದ್ದರು.