ಜಿಲ್ಲೆ

ಮತ ಎಣಿಕೆ ವೀಕ್ಷಕರಾಗಿ ಡೋಮನ್​ ಸಿಂಗ್​ ನೇಮಕ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಲೋಕಸಭೆ ಚುನಾವಣೆ ಪ್ರಯುಕ್ತ ಭಾರತ ಚುನಾವಣಾ ಆಯೋಗವು ಧಾರವಾಡ ಲೋಕಸಭೆ ಮತೇತ್ರಕ್ಕೆ ಮತ ಎಣಿಕೆ ವೀಕ್ಷಕರಾಗಿ ಡೋಮನ್​ ಸಿಂಗ್​ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಮತ ಎಣಿಕೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಾರ್ವಜನಿಕರು ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದ ಅಂತರಾಷ್ಟ್ರೀಯ ಅತಿಥಿಗೃಹ ಶಾಲ್ಮಲಾದಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12ರವರೆಗೆ ವೀಕರನ್ನು ಭೇಟಿ ಮಾಡಿ ಸಲ್ಲಿಸಬಹುದು ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.