ಜಿಲ್ಲೆ

ಟೊಂಕಾದಲ್ಲಿ ಡಾಲ್ಪಿನ್ ಕಳೇಬರ ಪತ್ತೆ

Gadag - Desk - Tippanna Avadoot

ಹೊನ್ನಾವರ: ಅರಬ್ಬಿ ಸಮುದ್ರದಲ್ಲಿ ಆದ ಅನಿರೀಕ್ಷಿತ ಬದಲಾವಣೆಯಿಂದ ಎದ್ದ ಭಾರಿ ಗಾಳಿ ಮತ್ತು ತೆರೆಗಳಿಗೆ ಸಿಲುಕಿದ ಹಬ್ ಬ್ಯಾಕ್ ಪ್ರಭೇದದ ಡಾಲ್ಪಿನ್ ಕಳೇಬರ ಕಾಸರಕೋಡ ಟೊಂಕಾದಲ್ಲಿ ಪತ್ತೆಯಾಗಿದೆ. ತಜ್ಞ ವೈದ್ಯರು ಡಾಲ್ಪಿನ್ ಮರಣೋತ್ತರ ಪರೀಕ್ಷೆ ಮಾಡಿ ಹೂತರು.


ಕಾಸರಕೋಡದ ಮೀನುಗಾರರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು ರೀಫ್ ವಾಚ್ ವೈದ್ಯ ಡಾ. ಮನೋಹರ, ಡಾ. ಯಶಸ್ವಿನಿ ಅವರು ಡಾಲ್ಪಿನ್​ಗಳ ಮರಣೋತ್ತರ ಪರೀಕ್ಷೆ ಮಾಡಿ ಹೂತರು. ಸ್ಥಳೀಯ ಮೀನುಗಾರ ಮುಖಂಡ ರಾಜೇಶ ಗೋವಿಂದ ತಾಂಡೇಲ್, ತುಕಾರಾಂ ತಾಂಡೇಲ, ಕಮಲಾಕರ ತಾಂಡೇಲ ಇತರರು ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಸಿಬ್ಬಂದಿಗೆ ಸಹಕರಿಸಿದರು.

ಕಾಸರಕೋಡ ಕಡಲು ಡಾಲ್ಪಿನ್​ಗೆ ಹೆಸರುವಾಸಿಯಾಗಿದ್ದು, ಈ ಪ್ರದೇಶದಲ್ಲಿ ಡಾಲ್ಪಿನ್ ಜಿಗಿಯವ ದೃಶ್ಯವು ಹೊನ್ನಾವರ ಅರಣ್ಯ ವಿಭಾಗದ ರ್ವಂಗ್ ಪ್ಯಾನ್ 2023ರಲ್ಲಿ ಪ್ರಕಟವಾಗಿತ್ತು. ಹೊನ್ನಾವರ ಅರಣ್ಯ ವಲಯವು ಅಳಿವಿನಂಚಿನಲ್ಲಿರುವ ಸಮುದ್ರ ಸಸ್ತನಿಗಳ ಸಂರಕ್ಷಣೆಗೆ ಸ್ಥಳೀಯ ಮೀನುಗಾರರ ಸಹಕಾರದಿಂದ ಶ್ಲಾಘನೀಯ ಕಾರ್ಯಮಾಡುತ್ತಾ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.