ಕುಕನೂರು ತಾಲೂಕಿನ ಭಾನಾಪುರ ಹತ್ತಿರ ರಾಷ್ಟ್ರದ ಆಟಿಕೆ ಉತ್ಪಾದನಾ ಕ್ಲಸ್ಟರ್ ಫ್ಯಾಕ್ಟರಿ ನಿರ್ಮಾಣ ಜಾಗವನ್ನು ಸಚಿವ ಬಿ.ಸಿ.ಪಾಟೀಲ್ ಶುಕ್ರವಾರ ವೀಕ್ಷಿಸಿದರು. ಶಾಸಕ ಹಾಲಪ್ಪ ಆಚಾರ್, ಡಿಸಿ ಎಸ್.ವಿಕಾಸ್ ಕಿಶೋರ್ ಇತರರಿದ್ದರು. 
ಜಿಲ್ಲೆ

ಗೊಂಬೆ ಫ್ಯಾಕ್ಟರಿ ನಿರ್ಮಾಣ ಜಾಗ ವೀಕ್ಷಿಸಿದ ಸಚಿವ

ಕುಕನೂರು: ತಾಲೂಕಿನ ಭಾನಾಪುರ ಹತ್ತಿರ ರಾಷ್ಟ್ರದ ಆಟಿಕೆ ಉತ್ಪಾದನಾ ಕ್ಲಸ್ಟರ್ ಫ್ಯಾಕ್ಟರಿ ನಿರ್ಮಾಣ ಜಾಗವನ್ನು ಸಚಿವ ಬಿ.ಸಿ ಪಾಟೀಲ್ ಶುಕ್ರವಾರ ವೀಕ್ಷಿಸಿದರು.

ಫ್ಯಾಕ್ಟರಿ ಕಾಮಗಾರಿ ಬಗ್ಗೆ ಅಧಿಕಾರಿ ವರ್ಗದವರ ಜತೆ ಚರ್ಚಿಸಿದರು. ಕಾಮಗಾರಿ ಶೀಘ್ರ ಆರಂಭಿಸಲು ಸೂಚಿಸಿದರು. ಶಾಸಕ ಹಾಲಪ್ಪ ಆಚಾರ್ ಮಾತನಾಡಿ, 40 ಸಾವಿರ ಜನರಿಗೆ ಇದರಿಂದ ಉದ್ಯೋಗ ಸಿಗಲಿದೆ. ಈ ಭಾಗದ ಜನರಿಗೆ ಉದ್ಯೋಗ ಸಿಗುವ ಭರವಸೆ ಇದೆ. ಭೂಮಿ ಖರೀದಿ ಪೂರ್ಣ ಆಗುತ್ತಿದೆ ಎಂದರು. ಡಿಸಿ ಎಸ್.ವಿಕಾಸ್ ಕಿಶೋರ್ ಹಾಗೂ ಅಧಿಕಾರಿಗಳಿದ್ದರು.