ಚಿಮ್ಮಡ: ಗ್ರಾಮದಲ್ಲಿ ಲೇಝಿಮ್ ಉತ್ಸವ ಡೋಲಿ ಮೆರವಣಿಗೆಯೊಂದಿಗೆ ಆಚರಿಸಲಾಯಿತು.
ಕಳೆದ ಐದು ದಿನಗಳಿಂದ ಗ್ರಾಮದ ಜಾಮಿಯಾ ಮಸೀದಿ ಹಾಗೂ ಗ್ರಾಮ ಚಾವಡಿ ಪಕ್ಕದ ಅಂಚೆ ಕಚೇರಿಯಲ್ಲಿ ಲಾಲಸಾಬಲಿ ಹಾಗೂ ಹುಸೇನಬಾಷ ದೇವರುಗಳಿಗೆ ಪ್ರತಿನಿತ್ಯ ವಿಶೇಷ ಪೂಜೆ ನೆರವೇರಿಸಲಾಯಿತು.
ಹಬ್ಬದ ಕೊನೆಯ ದಿನವಾದ ಭಾನುವಾರ ದೇವರನ್ನು ವಿಸರ್ಜಿಸಲು ಹೊಳೆಗೆ ಒಯ್ಯುವ ಮುಂಚೆ ನಡೆಯುವ ಡೋಲಿ ಉತ್ಸವದಲ್ಲಿ ದೇವರುಗಳಿಗೆ ಬೆತ್ತಾಸು, ಖಾರಿಕ, ಬಿಸ್ಕತ್‌ಗಳನ್ನು ಎಸೆಯುವ ಮೂಲಕ ಭಕ್ತರು ಹರಕೆ ತೀರಿಸಿದರು.
ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಅಣ್ಣಪ್ಪಗೌಡ ಪಾಟೀಲ, ಆರ್.ಎಂ. ಬಗನಾಳ, ಬಿ.ಎಸ್. ಪಾಟೀಲ ಇದ್ದರು.