ಜಿಲ್ಲೆ

ಪ್ಲಾಸ್ಟಿಕ್‌ ಬಲೆ ತಿಂದು ಮೃತಪಟ್ಟ ಡಾಲ್ಫಿನ್‌

Uttara Kannada - Subash Hegde

ಕಾರವಾರ: ಪ್ಲಾಸ್ಟಿಕ್ ಬಲೆಯನ್ನು ತಿಂದು ಜೀರ್ಣಿಸಿಕೊಳ್ಳಲಾಗದೇ ಡಾಲಿನ್ ಒಂದು ಮೃತಪಟ್ಟ ಘಟನೆ ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿ ನಡೆದಿದೆ. 7.8 ಅಡಿ ಉದ್ದವಿರುವ ಇಂಡೋ ಫೆಸಿಪಿಕ್ ಹಂಪ್ ಬ್ಯಾಕ್ ಪ್ರಭೇದಕ್ಕೆ ಸೇರಿದ ಪ್ರೌಢ ಹೆಣ್ಣು ಡಾಲಿನ್ ಇದಾಗಿದೆ.

ಅರಣ್ಯ ಇಲಾಖೆ ಕಾರವಾರ ವಿಭಾಗದ ಮರೈನ್ ಆ್ಯಂಡ್ ಇಕೋ ಸಿಸ್ಟಂ ಸೆಲ್‌ನ ಅಧCಕಾರಿಗಳು ಪರಿಶೀಲಿಸಿದ್ದು, ಕುಂದಾಪುರದ ರೀಪ್ ವಾಚ್ ಸಂಸ್ಥೆಯ ಕಡಲ ಜೀವ ಶಾಸ್ತ್ರ ತಜ್ಞರು ಆಗಮಿಸಿ ಡಾಲಿನ್ ಮರಣೋತ್ತರ ಪರೀಕ್ಷೆ ನಡೆಸಿದರು. ಡಾಲಿನ್ ಹೊಟ್ಟೆಯಲ್ಲಿ ಸುಮಾರು ವಾಲಿಬಾಲ್ ಗಾತ್ರದ ಪ್ಲಾಸ್ಟಿಕ್ ಬಲೆಗಳ ಉಂಡೆ ಕಂಡುಬಂದಿದೆ.

ಸಾಮಾನ್ಯವಾಗಿ ಡಾಲಿನ್‌ಗಳು ಸಮುದ್ರದಲ್ಲಿ ತೂಫಾನ್ ಇದ್ದಾಗ ಬೋಟ್ ಅಥವಾ ಕಲ್ಲಿಗೆ ಬಡಿದು ಮೃತಪಡುತ್ತದೆ. ಶೇ.40 ರಷ್ಟು ಡಾಲಿನ್‌ಗಳ ಹೊಟ್ಟೆಯಲ್ಲಿ ಈಗ ಪ್ಲಾಸ್ಟಿಕ್ ವಸ್ತುಗಳು ಕಂಡುಬರುತ್ತಿವೆ. ಎಂದು ರೀಪ್ ವಾಚ್ ಸಂಸ್ಥೆಯ ಯೋಗೇಂದ್ರ ನಾಯ್ಕ ತಿಳಿಸಿದ್ದಾರೆ.

ಎಸಿಎಫ್ ಕೆ.ಡಿ.ನಾಯ್ಕ ಆಗಮಿಸಿ ಪರಿಶೀಲಿಸಿದರು. `ಆಮೆ, ಡಾಲಿನ್ ಮುಂತಾದ ಜಲಚರಗಳಿಗೆ ಪ್ಲಾಸ್ಟಿಕ್ ಮಾರಕವಾಗುತ್ತಿವೆ. ಪ್ಲಾಸ್ಟಿಕ್ ಬಲೆಗಳು ಅವುಗಳ ರೆಕ್ಕೆಗಳಿಗೆ ಸುತ್ತಿಕೊಳ್ಳುತ್ತವೆ. ಅವುಗಳು ಮೀನುಗಳನ್ನು ನುಂಗುವ ಸಂದರ್ಭದಲ್ಲಿಯೂ ಪ್ಲಾಸ್ಟಿಕ್ ಹೊಟ್ಟೆಯೊಳಗೆ ಹೋಗಿ ಸಾಯುತ್ತಿವೆ. ಇದರಿಂದ ಪ್ಲಾಸ್ಟಿಕ್ ವಸ್ತುಗಳು ಸಮುದ್ರ ಸೇರದಂತೆ ತಡೆಯಬೇಕು ಎಂದರು. ಮರೈನ್ ಆ್ಯಂಡ್ ಇಕೋ ಸಿಸ್ಟಂ ಸೆಲ್‌ನ ಆರ್‌ಎಫ್‌ಒ ಕಿರಣ ಮನವಚಾರಿ, ಸಾಮಾಜಿಕ ಅರಣ್ಯ ವಿಭಾಗದ ಆರ್‌ಎಫ್‌ಒ ಹರಿಕಿರಣ ಭಟ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.