ಬೆಂಗಳೂರು: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವುದು ದೇಶ ಸೇವೆಯ ಕಾರ್ಯ. ವೈರಿಗಳನ್ನು ಎದುರಿಸಿ ಹೋರಾಡುವ ಮೂಲಕ ದೇಶವನ್ನು ರಸುವ ಅವಕಾಶ ಸೈನ್ಯಕ್ಕೆ ಸೇರುವುದರಿಂದ ದೊರೆಯುತ್ತದೆ ಎಂದು ಕರ್ನಲ್ ಜನ್ ಬಹದ್ದೂರ್ ಸಿಂಗ್ ಹೇಳಿದ್ದಾರೆ.
ಬೆಂಗಳೂರು ಜಿಲ್ಲಾ ಶಿಣ ಮತ್ತು ತರಬೇತಿ ಸಂಸ್ಥೆ ನಗರದ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ "ವೀರಗಾಥ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೈನ್ಯದಲ್ಲಿ ಸೇರಬೇಕು ಎಂದಾದರೆ ದೈಹಿಕ ಮತೆಯ ಜತೆಗೆ ಮಾನಸಿಕ ಧೃಡತೆಯೂ ಮುಖ್ಯ. ಕಠಿಣ ಪರಿಶ್ರಮದಿಂದ ಕಾರ್ಯ ನಿರ್ವಹಿಸಿದಲ್ಲಿ ಯಾವುದೇ ವೃತ್ತಿಯಲ್ಲಿದ್ದರೂ ಯಶಸ್ಸನ್ನು ಸಾಧಿಸಬಹುದು. ಸಮಾಜದಲ್ಲಿ ಉತ್ತಮ, ನಾಗರೀಕರಾಗಿ ಬದುಕುವ ಮೂಲಕವೂ ದೇಶ ಸೇವೆ ಮಾಡಬಹುದು. ಇದಕ್ಕಾಗಿ ವಿದ್ಯಾರ್ಥಿಗಳು ಸಹಾಯ ಮಾಡುವ, ಗೌರವ ಕೊಡುವ, ಮೆ ಕೇಳುವ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಸೈನ್ಯದ ಉನ್ನತ ಹುದ್ದೆಗಳಲ್ಲಿ ಮಹಿಳೆಯರಿಗೆ ಕರ್ತವ್ಯ ನಿರ್ವಹಿಸಲು ಉತ್ತಮ ಅವಕಾಶ ಮತ್ತು ಪೂರಕ ಸೌಲಭ್ಯಗಳು ಭಾರತೀಯ ಸೇನೆಯಲ್ಲಿ ಇವೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇನೆ ಸೇರಬೇಕು ಎಂದು ಕರ್ನಲ್ ಜನ್ ಬಹದ್ದೂರ್ ಸಿಂಗ್ ತಿಳಿಸಿದರು.
ಡಯಟ್ ಸಂಸ್ಥೆಯ ಪ್ರಾಂಶುಪಾಲ ಐ.ಎಫ್. ಮಾಗಿ, ಉಪನ್ಯಾಸಕ ಡಾ. ಎಚ್.ಬಿ. ಚಂದ್ರಶೇಖರ್, ಡಯಟ್ ಸಂಸ್ಥೆಯ ಉಪನ್ಯಾಸಕರು, ನೋಡಲ್ ಅಧಿಕಾರಿಗಳು ಮತ್ತಿತರರಿದ್ದರು.