ತಲ್ಲೂರ: ರೇಬೀಸ್ ಸೋಂಕು ರೋಗವಾಗಿದ್ದು, ನಾಯಿಗಳಿಗೆ ಲಸಿಕೆ ಕೊಡಿಸಿ ಸುರತಾ ಕ್ರಮ ಕೈಗೊಳ್ಳಬೇಕು ಎಂದು ಪಶು ವೈದ್ಯಾಧಿಕಾರಿ ಜಾಕೀರಹುಸೇನ್ ದೊಡಮನಿ ಹೇಳಿದರು.
ಗ್ರಾಮದ ಬಸವೇಶ್ವರ ಯುವಕ ಮಂಡಳ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಪಂ, ಯರಗಟ್ಟಿ ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ಆಶ್ರಯದಲ್ಲಿ ರೇಬೀಸ್ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ರೇಬೀಸ್
ಹುಚ್ಚುನಾಯಿಗಳ ಲಾಲಾರಸದಿಂದ ವೈರಾಣುಗಳ ಮೂಲಕ ಹರಡುವ ಮಾರಣಾಂತಿಕ ರೋಗವಾಗಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ರೇಬೀಸ್ ರೋಗದ ಬಗ್ಗೆ ಜಾಗೃತಿ ಹೊಂದಬೇಕು ಎಂದರು. ಮುಖ್ಯಶಿಕ ರಾಜಶೇಖರ ದುಂಡನಕೊಪ್ಪ ಮಾತನಾಡಿದರು. ಮುಖ್ಯಶಿಕ ಡಿ.ಡಿ.ಭೋವಿ, ಪಶುಸಖಿ ಸುಜಾತಾ ಸರದಾರ, ಗೋವಿಂದ ಲಮಾಣಿ, ಲಕ್ಷ$್ಮಣ ಪಾಟೀಲ, ಎಸ್.ಎ್.ಮುರಗನ್ನವರ, ಎಸ್.ಎಂ.ಹಂಜಿ, ಮಲ್ಲಿಕಾರ್ಜುನ ಬದಾಮಿ, ಎಸ್.ಎ್.ಬಡಿಗೇರ, ಎ.ಜೆ.ಕಾಂಬಳೆ, ಜಿ.ಎ.ಕೊಟ್ರಶೇಟ್ಟಿ, ಪಿ.ಎ.ಸುಣಧೋಳಿ ಇತರರಿದ್ದರು.