ಜಿಲ್ಲೆ

ಬೀದಿ ನಾಯಿಗಳ ದಾಳಿಗೆ ಜಿಂಕೆ ಬಲಿ

reportermys

ಚಾಮರಾಜನಗರ: ಕಾಡಿನಿಂದ ದಿಕ್ಕು ತಪ್ಪಿ ಗ್ರಾಮದತ್ತ ಬಂದ ಜಿಂಕೆ ಬೀದಿನಾಯಿಗಳ ದಾಳಿ‌ಗೆ ಸಿಲುಕಿ ಸಾವನ್ನಪ್ಪಿರುವ ಘಟನೆ‌‌ ಪುಣಜೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ದೊಡ್ಡಮೂಡ ಹಳ್ಳಿ ಬಳಿ‌‌ ಘಟನೆ‌‌ ನಡದಿದ್ದು, ಮಂಗಳವಾರ ಬೆಳಗ್ಗೆ ಜಿಂಕೆ‌ ಮೃತಪಟ್ಟಿರುವ ವಿಷಯ ತಿಳಿದು ಬಂದಿದೆ. ಕಾಡಿನಿಂದ ಗ್ರಾಮದತ್ತ ಬಂದ ಸುಮಾರು ಮೂರರಿಂದ ನಾಲ್ಕು ವರ್ಷದ ಜಿಂಕೆಯನ್ನು ಬೀದಿನಾಯಿಗಳು ಬೆನ್ನಟ್ಟಿ ಕಚ್ಚಿ ಸಾಯಿಸಿವೆ.

ಬೀದಿ ನಾಯಿಗಳ ಹಾವಳಿ ತಡೆಗಟ್ಟದೇ ಇರುವುದಕ್ಕೆ ಪ್ರಾಣಿ ಪ್ರಿಯರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಗ್ರಾಮಸ್ಥರು ಬೀದಿನಾಯಿಗಳ‌ ಉಪಟಳ ಕಂಡು ಬೆದರಿದ್ದು, ಮಕ್ಕಳನ್ನು‌ ಮನೆಯಿಂದ‌ ಹೊರಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ.

ಜಿಂಕೆ ಸಾವನ್ನಪ್ಪಿರುವ ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಸಿಬ್ಬಂದಿ ದೌಡಾಯಿಸಿದರು. ಜಿಂಕೆ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಮುಂದಾದರು.