ಕಿಕ್ಕೇರಿ: ಮುಧೋಳ ಶ್ವಾನ ಹೆಚ್ಚಿನ ಶಕ್ತಿಶಾಲಿಯಾಗಿದ್ದು, ಇಂತಹ ಶ್ವಾನಗಳನ್ನು ಸಾಕಲು ಮುಂದಾಗುವಂತೆ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ತಿಳಿಸಿದರು.
ಸಮೀಪದ ಜಾಗಿನಕರೆ ಗ್ರಾಮದಲ್ಲಿ ಲಯನ್ಸ್ ರೇಸಿಂಗ್ ಕ್ಲಬ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶ್ವಾನಗಳ ಓಟ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಶ್ವಾನಗಳನ್ನು ಇತ್ತೀಚಿನ ದಿನದಲ್ಲಿ ಹೆಚ್ಚು ಸಾಕುತ್ತಿರುವುದು ಖುಷಿಯ ಸಂಗತಿ. ಮುಧೋಳ ಶ್ವಾನ ಶಕ್ತಿ, ನಿಷ್ಟೆಗೆ ಹೆಸರುವಾಸಿಯಾಗಿದೆ. ಶ್ವಾನಗಳನ್ನು ಸಾಕುವ ಜತೆಗೆ ಸೂಕ್ತ ಕಾಲಕ್ಕೆ ಲಸಿಕೆ ಹಾಕಿಸುವುದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದು ಮುಖ್ಯ. ಪ್ರಥಮ ಸ್ಥಾನ ಪಡೆದ ಶ್ವಾನ ಮಾಲೀಕರಿಗೆ 15 ಸಾವಿರ ರೂ. ವೈಯಕ್ತಿಕವಾಗಿ ನೀಡುವುದಾಗಿ ಘೋಷಣೆ ಮಾಡಿದರು. ವಿಜೇತ ಶ್ವಾನ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು.
ಮನ್ಮುಲ್ ನಿರ್ದೇಶಕ ಎಂ.ಬಿ ಹರೀಶ್, ಮಂಜುನಾಥ್, ಜಾಗಿನಕೆರೆ ಅಂಬರೀಷ್, ಕೈಗೊನಹಳ್ಳಿ ಜಯರಾಮ್, ಡೈರಿ ಅಶೋಕ್, ರೇಸಿಂಗ್ ಆಯೋಜಕ ದೀಪು, ರಾಜೇಗೌಡ, ವಿನಾಯಕ ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ಶ್ವಾನ ಪ್ರಿಯರು ಇದ್ದರು.