ಜಿಲ್ಲೆ

ಗ್ರಾಪಂ ಸದಸ್ಯನಿಗೆ ಕಚ್ಚಿದ ನಾಯಿ ಗುಂಡಿಗೆ ಬಲಿ

Dakshina Kannada

ಕುಂಬಳೆ: ಗ್ರಾಮ ಪಂಚಾಯತಿ ಸದಸ್ಯನಿಗೆ ಕಚ್ಚಿದ ನಾಯಿಯನ್ನು ಬ್ಲಾಕ್ ಪಂಚಾಯಿತಿ ಸದಸ್ಯರೊಬ್ಬರು ಗುಂಡಿಕ್ಕಿ ಕೊಂದ ಘಟನೆ ಸೋಮವಾರ ನಡೆದಿದೆ.

ಶವಸಂಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇರಳದ ಮುಂಡಕ್ಕಾಯಂ ಗ್ರಾಮ ಪಂಚಾಯಿತಿ ಸದಸ್ಯ ಸಿ.ವಿ.ಅನಿಲ್ ಕುಮಾರ್ ಮತ್ತು ಪಾಲೂರ್ಕಾವು ನಾಡಕ್ಕಲ್ ಅಲನ್ ಎಂಬುವರಿಗೆ ನಾಯಿಯೊಂದು ಕಚ್ಚಿತ್ತು. ಸಂಬಂಧಿಕರ ಮನೆಗೆ ಭೇಟಿ ನೀಡಿದ ಅಲನ್‌ಗೆ ಮೊದಲು ನಾಯಿ ಕಚ್ಚಿತು.

ಬಳಿಕ ಅದೇ ಪರಿಸರದ ಮುಂಡಕಾಯಂ ವಿಭಾಗದ ಬ್ಲಾಕ್ ಪಂಚಾಯಿತಿ ಸದಸ್ಯ ಜೋಶಿ ಮಂಗಲಂ ಅವರ ಮನೆ ಅಂಗಳದಲ್ಲಿದ್ದ ಅನಿಲ್ ಕುಮಾರ್ ಅವರ ಮೇಲೂ ದಾಳಿ ನಡೆಸಿದೆ. ಅನಿಲ್ ಕುಮಾರ್ ಜೋಶಿಯ ಪಾಲಕರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಆಗಮಿಸಿದ್ದರು. ನಾಯಿ ಜೋಶಿ ಅವರ ಮನೆಯೊಳಗೆ ನುಸುಳಲು ಯತ್ನಿಸಿದ ವೇಳೆ ತನ್ನ ಪರವಾನಗಿ ಇರುವ ಬಂದೂಕಿನಿಂದ ನಾಯಿಯನ್ನು ಗುಂಡಿಕ್ಕಿ ಕೊಂದಿದ್ದಾರೆ.