ಸವಣೂರ: ಅನಧಿಕೃತವಾಗಿ ಜಮೀನಿನಲ್ಲಿ ಇಟ್ಟಿದ್ದ ನಾಡ ಬಾಂಬ್ ಕಚ್ಚಿ ನಾಯಿಯೊಂದು ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ. ತಾಲೂಕಿನ ಹತ್ತಿಮತ್ತೂರ ಹೋಬಳಿ ವ್ಯಾಪ್ತಿಯ ಜಲ್ಲಾಪುರ ಗ್ರಾಮದ ಮಲ್ಲನಗೌಡ ಪಾಟೀಲ ಎಂಬುವವರ ಹೊಲದಲ್ಲಿ ಪ್ರಾಣಿಗಳನ್ನು ಕೊಲ್ಲುವ ಉದ್ದೇಶದಿಂದ ಅನಧಿಕೃತವಾಗಿ ನಾಡ ಬಾಂಬ್ಗಳಿಗೆ ಪ್ರಾಣಿಯ ಕೊಬ್ಬು ಸವರಿ ಇಡಲಾಗಿತ್ತು. ಮಂಗಳವಾರ ನಾಯಿಯೊಂದು ನಾಡ ಬಾಂಬ್ ಅನ್ನು ಕಚ್ಚಿದ್ದು, ಕೂಡಲೇ ಬಾಂಬ್ ಸ್ಪೋಟಗೊಂಡು ಶ್ವಾನದ ಮುಖ ಛಿದ್ರಗೊಂಡು ಸ್ಥಳದಲ್ಲೇ ಅಸುನೀಗಿದೆ. ಇನ್ನೂ ಎರಡು ಜೀವಂತ ನಾಡಬಾಂಬ್ಗಳು ಅದೇ ಸ್ಥಳದಲ್ಲಿ ದೊರಕಿವೆ. ಘಟನೆ ಕುರಿತು ಮಹದೇವಪ್ಪ ಬಸಲಿಂಗಪ್ಪ ಸವಣೂರ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಸವಣೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಸವಣೂರ ಠಾಣೆ ಸಿಪಿಐ ಆನಂದ ಒನಕುದ್ರೆ, ಅಪರಾಧ ಸ್ಥಳ ಪರೀಕ್ಷಾ ತಜ್ಞ ದಯಾನಂದ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸವಣೂರ ತಾಲೂಕಿನ ಹತ್ತಿಮತ್ತೂರ ಹೋಬಳಿ ವ್ಯಾಪ್ತಿಯ ಜಲ್ಲಾಪೂರ ಗ್ರಾಮದ ಹೊಲವೊಂದರಲ್ಲಿ ನಾಡಬಾಂಬ್ ಸ್ಪೋಟಗೊಂಡು ನಾಯಿ ಸತ್ತ ಸ್ಥಳಕ್ಕೆ ಸವಣೂರ ಠಾಣೆ ಸಿಪಿಐ ಆನಂದ ಒನಕುದ್ರೆ, ಅಪರಾಧ ಸ್ಥಳ ಪರೀಕ್ಷಾ ತಜ್ಞ ದಯಾನಂದ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ಕೈಗೊಂಡರು.